ಕೋರೋನಾ... ಕೋರೋನಾ...
2020 January ತಿಂಗಳ ಕೊನೀ ತನಕಾ, ಕೋರೋನಾ ಅಂದ್ರ ಜಗತ್ತಿನ ಬಹುತೇಕ ಜನಕ್ಕ ಬೀರ್ ಅನ್ನೋದು ಒನ್ದ ಗೊತ್ತಿತ್ತು. ಯಾವದರೇ ಪಬ್ಬಿಗೇ ಹೋಗಿ, "ಕೋರೋನಾ" ಅಂತ ಅಂದ್ರ, ಒಂದು ಛಂದ ಅನಿ ಬಾಟಲ್ಯಾಗೋ ಅಥವಾ ಗ್ಲಾಸ್ನಾಗೋ, ತುಂಬಿ ತುಳಕೋ ಹಾಂಗ ಬೀರ್ ಸರಬರಾಜ್ ಆಗತಿತ್ತು. ಅದು ಕೋರೋನಾದ್ ಸಣ್ಣ ಪರಿಚಯ, ಜಗತ್ತಿನ ಒನ್ದು ಗುಂಪಿನ ಜನರಿಗೆ ಅಷ್ಟ. ಬ್ಯಾರೆ ಜನಕ್ಕ ಅದರ ಗಂಧಗಾಳೀನು ಇರ್ಲಿಲ್ಲ. ಆಮ್ಯಾಲೆ February ಇಂದ ತಿಳೀತು, ಕೋರೋನಾ ಒನ್ದ್ virus ಅಂತ. ಅದೂ ಪ್ರಾಣಾಂತಿಕ virus !!! ಅಂದ್ರ, ಸುಮ್ಮನ ಇದ್ರ, ನಮ್ಮ ಪ್ರಾಣಾನು ತಗೀತದ!!! ತಗೋನೀ, ಇಡೀ ಜಗತ್ತಿಗೇ ಗೊತ್ತಗಿ ಹೋತ್, ಈ "ಕೋರೋನಾ" ಅಂದ್ರ ಏನ್ ಅಂತ...
ಇಲ್ಲೆ, ನಾ ಕೋರೋನಾ ಯಾವ ದೇಶದಿಂದ ಬಂತು, ಅದರಿಂದ ಯಾರಿಗೆ ಏನ್ ಆತು, ಅದರಿಂದ ಹ್ಯಾಂಗ ಬಛಾವ್ ಆಗ್ಬೇಕು ಅನ್ನೋ serious ವಿಷಯದ ಬಗ್ಗೆ ಏನು ಬರಿಯಂಗಿಲ್ಲಾ. ಯಾಕಂದ್ರ ಅದರಬಗ್ಗೆ ಬರೀಲಿಕ್ಕೆ, ಹೇಳಲಿಕ್ಕೆ , ಪ್ರಚಾರ ಮಾಡಲಿಕ್ಕೆ, ಭವಿಷ್ಯ ತೋರಿಸಲಿಕ್ಕೆ, ಅದರ interview ತಗೋಳಿಕ್ಕೆ ಭಾಳಷ್ಟು ಮಂದಿ ಇದ್ದಾರ್ ಮತ್ತ ಹುಟ್ಯಾರ, ಹಾಂಗ ಹುಟ್ಕೋತಾರ. ಇಲ್ಲೆ ನಾ ಬರಿಯೋದು ಭಾಳಾ simple. ಕೋರೋನಾದಿಂದ ಆದ ಆಜು ಬಾಜು ಪರಿಣಾಮ. (English ನಾಗ side effects). ಅದು ಮನ್ಶನ್ ಆರೋಗ್ಯದ ಮ್ಯಾಲೆ ಅಲ್ಲಾ, ಅಂದ್ರ ಡಾಕ್ಟರ್ ಏನ್ ಅಂದ್ರು, ಏನ್ ಔಷಧಿ ಕೊಟ್ರು, ಎಲ್ಲಿ ಮಲಕ್ಕೋ ಅಂದ್ರು, ಏನ್ ಮಾಡು ಅಂದ್ರು... ಅಂಥಾವಕ್ಕೆಲ್ಲಾ online University ಹುಟ್ಟಕೋಂಡಾವ ಒಂದ ವಾರದಾಗ. ಯಪ್ಪಾ, ಕೋರೋನಾ ಹುಟ್ಟುದರ ಕಿಂತಾ ಹರಡೂದ ಭಾಳ fast ಆಗ್ಯಾದ. ಹ್ಯಾಂಗಂದ್ರ, ಅದರ ಪ್ರಚರಕರು... ಅಂದ್ರ TV News Channel ದವ್ರು. ಆಮ್ಯಾಲೆ, WhatsApp ಗುಂಪಿನವ್ರು. ಏಲ್ಲಾಕಡೇ ಅದು ಹರಡುದುಕ್ಕ ಮುಂಚೆನ ಪ್ರಚಾರ ಮಾಡಿಬಿಟ್ರು. ಅಂದ್ರ "ಕೂಸು ಹುಟ್ಟುಕ್ ಮುಂಚೆನ ಹೆಸರು ಇಟ್ರಂತ", ಹಾಂಗ್ ಆತು ಪರಿಸ್ಥಿತಿ. ಅದು, ಹೇಳೋ ರೀತಿ ಮ್ಯಾಲೆ ಹೋಗ್ತದ. ನೀವು ಹ್ಯಾಂಗ ತಯ್ಯಾರ ಆಗಬೇಕು ಅಂತ ಹೇಳೋದು ಬಿಟ್ಟು, ಹ್ಯಾಂಗ ಸಾಯ್ತಿರಿ ಅಂತ ಹೇಳಲಿಕತ್ತ್ರು. ಜನರನ್ನ ಹೇದಿರ್ಸಿ ಬಿಟ್ರು. ಅಲ್ಲೇ ಎಡವಟ್ಟಾಗಿದ್ದು ನೋಡ್ರಿ...
ಮೊದಲ, ಅದು ಹ್ಯಾಂಗ ಪ್ರಸಾರ ಆಗ್ತದ ಅಂತ ಯಾರೀಗೂ ಗೊತ್ತಿರ್ಲಿಲ್ಲ. ಅದನ್ನ ಅರ್ಧಂಬರ್ಧ ತಿಳಕೋಂಡ ಜನಾ, ಪಾಪ, ಹೋರಗಹೊಗೂದು ಎಲ್ಲೆ ಬಂದ ಆಗ್ತದ ಬಾ ಅಂತ ಹೇಳಿ, ಅಂಗಡೀಗೆ ಹೋಗಿ ಗಾಡೀ ತುಂಬೋಹಾಂಗ ಸಾಮಾನು ತಂದು ಇಟ್ಟಕೊಳಿ ಕತ್ರು. ಅದು toilet paper. ಹಾ? ತಿನ್ನೋ ಸಾಮಾನು ತಂದು ಇಟ್ಟಕೋಂಡಾರ ಅಂದ್ರ ತಿಳೀತದಪಾ, ಆದ್ರ ತೊಳಕೊಳ್ಳು ಸಾಮಾನ? ಅದೂ ಅರ್ಧಾ ಗಾಡೀ, ಅದ... "ಒಂದು ಕುರೀ ಬ್ಯಾ ಅಂದ್ರ, ಏಲ್ಲಾ ಕುರೀ ಬ್ಯಾ ಅಂತಾವಲ್ಲಾ" ಹಾಂಗ, ಎಲ್ಲಾ ಜನಾ ಸಾಮಾನು ಎತ್ತಕೋಂಡ ಹೋಗವ್ರ. ದೊಡ್ಡು ದೋಡ್ಡು ಅಂಗಡಿ ಎಲ್ಲಾ ಒಂದ ದಿವಸಕ್ಕ ಖಾಲೀ... ಅಂಗಡೀಯವ್ರಿಗು ತಿಳೀವಾಲ್ತು ಏನ್ ಮಾರ್ಬೇಕಂತ, ಮಂದೀಗೂ ತಿಳೀವಾಲ್ತು ಏನ್ ಎತ್ಕೋಬೇಕಂತ. ಬೇಕಾಗಿದ್ದು, ಬ್ಯಾಡಾಗಿದ್ದು ಎಲ್ಲಾ ತಗೋಂಡು ಹೋಂಟ್ರು.
ನನ್ನ ಪ್ರಕಾರ, ಕೋರೋನಾ ಸುದ್ದಿ ಬಂದಾಗಿಂದ, ಭಾಳಷ್ಟು ಸುಧಾರಣೆ ಆಗ್ಯಾವ. "ಮಹಾಮಾರೀ ಬಂದಾಗ, ಏನ್ ಸುಧಾರಣೇನೋ?" ಅಂತ ಅನ್ನಬ್ಯಾಡ್ರಿ. ಮನಷ್ಯಾನ್ ಜೀವನನ್ನ್ "Back to Basics" ಗೆ ತಗೋಂಡು ಬಂದದ. ನಮ್ಮ ಹಿರಿಯರು, ನಾವ್ ಸಣ್ಣವರಿದ್ದಾಗ ಏನ್ ಹೇಳ್ತಿದ್ರು ಹೊರಗಿಂದ ಬಂದ ಕೂಡ್ಲೆ, "ಕೈ ಕಾಲ್ ಸ್ವಚ್ಚಂಗ ತೊಳಕೋ". ಈಗ ಜಗತ್ತಿನ ಎಲ್ಲಾ ಡೊಕ್ಟರ್ ಏನ್ ಹೇಳಿಕತ್ತಾರ? "ಕೈ ಕಾಲ್ ಸ್ವಚ್ಚಂಗ ತೊಳಕೋರಿ". ಸಾಲ್ಯಾಗ excercise ಮಾಡೋವಾಗ P.E. ಮಾಸ್ತರ ಹೇಳ್ತಿದ್ರು, "ಏಕ್ ಹಾಥ ದೂರಿ". ಈಗ ಹೊರಗ ಹೋದ್ರು ಅದೇ ಏಕ್ ಹಾಥ ದೂರಿ ಏನು ದೋ ಹಾಥ ದೂರಿ ವಳಗ ಇದ್ದೀವಿ. ಅಮ್ಮ ಸಾಲಿಗೆ ಹೋಗೋವಾಗ ಹೇಳ್ತಿದ್ಲು, "ಸೀನೋಬೇಕಾದ್ರ ವಸ್ತ್ರ ಉಪಯೋಗ್ಸು", ಈಗ ಮಸಡೀಗೇ mask ಹಾಕ್ಕೋಂಡು ಅಡ್ಡಾಡ್ಲಿ ಕತ್ತೇವಿ. ಇವೆಲ್ಲಾ ನಾವು ಮರ್ತಿವೇನು? ಇವು ನಾವು ಸಣ್ಣವರಿದ್ದಾಗಿಂದ ಕೇಳಕೋಂಡು ಬಂದಿವಿ. ಹೇಳ್ತಾರಲ್ಲ, "ಬರ್ಬರ್ತ ರಾಯರ ಕುದರೀ, ಕತ್ತಿ ಆತು ಅಂತ", ಹಾಂಗ ಕೋರೋನಾ ನಮ್ಮನ್ನ ವಾಪಸ ಕುದರೀ ಮಾಡಲಿಕ್ಕತ್ತದ ಅನ್ನಸ್ತದ.
ಇನ್ನ ನಾ ಕೆಳಗ ಹೇಳೋ ಸುಧಾರಣೆ, ಅವರವ ಅನುಭವಕ್ಕ ಬಿಟ್ಟಿದ್ದು. ನನ್ನ ಯಾವದಕ್ಕೂ ಜವಾಬ್ದಾರಿ ಹಿಡೀಬ್ಯಾಡ್ರಿ. ಅದ್ ಏನ್ ಸುಧಾರಣೆ ಅಂದ್ರ್, "ಗಂಡ - ಹೆಂಡತಿ ಮನ್ಯಾಗ ಇರ್ರಿ ಸುಮ್ಮನ. ಯಾರೂ ಹೋರಗ ಬರಬ್ಯಾಡ್ರೀ", ಅಂತ ಸರ್ಕಾರನ ಘೋಷಿಸಿ ಬಿಡ್ತು. ತಗೋರಿನ್ನ ಮಜಾ ನೋಡ್ರಿ... ಹೊಸದಾಗಿ ಮದುವಿ ಆಗಿತ್ತಂದ್ರ, ಅದು Officially Paid Honey Moon ಇದ್ದಾಂಗ. "ಹಮ್ ತುಮ್ .... ಎಕ ಕಮರೆಮೆ ಬಂದ ಹೋ...ಔರ್ ಚಾವಿ ಖೋಜಾಯೆ" ಅಂತ Bobby ಶಿನೇಮ್ಮಾದ್ ಹಾಡಾ ಹಾಡಕೋತ್ ಇರ್ತಾರ. ಇನ್ನ ಮದುವಿ ಆಗಿ ಹಳೀ ಮಾತು ಆಗಿತ್ತಂದ್ರ್, ನಿಮ್ಮ ಊಹಾಪೋಹಕ್ಕ್ limit ಇಲ್ಲ. ಕೆಲವೊಬ್ರ ಮನ್ಯಾಗ ಹಾವು - ಮುಂಗಸಿನ್ನ ಕೂಡಿ ಒಂದ ಬೋನಿನ್ಯಾಗ ಇಟ್ಟಂಗ, ಇನ್ನ ಕೆಲವೊಬ್ರ ಮನ್ಯಾಗ, ಬೆಕ್ಕು- ಇಲಿ ಇಟ್ಟಂಗ. ಮೊದಲೇ ಒನ್ದೆರಡು ದಿವಸ ಚೊಲೋ ಅನ್ನಸ್ತದ. ಪಾಪ, ಗಂಡನ್ನ ಮುಖಾ, ದಿವಸದ್ದ ಗಡಿಬಿಡಿ ಒಳಗ ನೋಡಿರಂಗಿಲ್ಲ. ಮುಂಜಾನೆ ಕೆಲಸಕ್ಕ ಹೋದಾವ, ರಾತ್ರಿನ ಬರ್ತಾನ. ಊಟಾ ಮಾಡಿ ಬಿದ್ಕೋತಾನ. ಪಾಪ ಹೇಂಡತೀನು ಅಷ್ಟ. ಅಡಗಿ ಮಾಡಿ, ಮಕ್ಕಳನ್ನ - ಸೀರಿಯಲ್ಲು ನೋಡ್ಕೋತ ಇರ್ತಾರ. ಮೊದಲ ಒನ್ದೆರಡು ದಿವಸಾ, ಗಂಡ- ಹೆಂಡತಿ ಛೋಲೋ time ತಗೀತಾರ ರಾಮ - ಸೀತಾ ಗತೆ. "ಇವ್ರಿಗೆ ಹೋಳಗಿ ಸೇರ್ತಾವ, ಪಾಪ ಹೋಳಗಿ ಮಾಡೋಣಂತ", "ಪಾಪಾ, ದಿವಸ್ಸಾ ಹೋರಗ tiffin ತಿಂತಾರ, ಇವತ್ತ ಮನ್ಯಾಗ ಇಡ್ಲಿ ಮಾಡೋಣಂತ" ಅಂತ ಹೆಂಡತಿ ಚಮ್ ಚಮಿತ ಅಡಗಿ ಮಾಡಿ ಹಾಕ್ತಾಳ. ಹಾಂಗ, ಗಂಡ ಸಹಿತ, as usual, ಏನೂ ಕೆಲಸಾ ಮಾಡಲಾರ್ದ, ಕಾಲ ಮ್ಯಾಲೆ ಕಾಲ ಹಾಕ್ಕೋಂಡು, ಕಟಿಯೋದ - ಕಟಿಯೋದು. ದಿವಸ್ಸಾ ಗಂಡಾ - ಹೆಂಡತಿ, photo ತಕ್ಕೋಳೋದು, facebook ಮ್ಯಾಲೆ ಹಾಕೋದು, #IamLovingIt , #SocialDistancing, #FamilyTime , #StayAtHome ಅಂತ. ಈ ಪ್ರೀತಿ ಭಾಳ ದಿವಸಾ ನಡದ್ರ, ಒಂದು ತಿಂಗಳದಾಗ, ಗಂಡಸರ shirtನ ಬಟನ್ನ ಸಹಿತ #SocialDistancing ಮಾಡಲಿಕ್ಕೆ ಶುರು ಮಾಡತಾವ. As everything comes with an Expiry date, ಈ ಎಲ್ಲಾ ಛೋಲೋ ದಿವಸ್ಸಕ್ಕೂ ಅಷ್ಟ. Expiry ದಿನಾ ಭಾಳ ಜಲ್ದಿ ಬರ್ತಾವ.
ಆಮ್ಯಾಲೇ ಶುರು ಆಗ್ತದ ನೋಡ್ರಿ ರಮಾನಂದ ಸಾಗರದ ರಾಮಾಯಣ ದಿಂದ B.R. Chopra ಮಹಾಭಾರತ !!! ಯಾಕಂದ್ರ ನಮ್ಮ ವಿಷ್ಣು ದಾದಾ ಹೇಳಿದ್ಧಾಂಗ, "ಯುಗ ಯುಗಗಳೇ ಸಾಗಲಿ, ನಮ್ಮ ಪ್ರೀತಿ ಶಾಶ್ವತಾ" ಹಾಡು? ನೆನಪ ಅದನೋ ಇಲ್ಲೋ? ರಾಮಾಯಣದಾಗ ರಮಾನಂದ ಅವರು ಒಂದ ಥರಾ ತೋರ್ಸ್ಯಾರ, ಮಹಾಭಾರತದಾಗ Chopra ಅವ್ರು ಒಂದ ಥರಾ ಹೆದ್ರಸ್ಯಾರ. ಅಂದ್ರ ಎರಡೂ ಯುಗದಾಗಿನ ಪ್ರೀತೀ definition ಬ್ಯಾರೇ ಅದ. ಅದಿರ್ಲಿ, ಈ #SocialDistancing, #FamilyTime, #StayAtHome ಎಲ್ಲಾ ಯಾವಾಗ ಮಂಜಿನಗತೆ ಕರಗತದೋ, ಅಂದ್ರ ರಾಮಾಯಣ ಪ್ರೀತಿ ಮುಗಿತದೋ, ಆಮ್ಯಾಲೆ ಜೀವನದ್ದ ಹಕೀಕತ್ ಕಾಣಸಲಿಕ್ಕೆ ಶುರು ಆಗ್ತವ. ಹವುರ್ಗ, ಭಾಂಡೆ ತಿಕ್ಕಾವ್ರು ಬರಲಿಲ್ಲಂದ್ರ "ನೀ ಭಾಂಡೆ ತಿಕ್ಕು - ನೀ ಭಾಂಡೆ ತಿಕ್ಕು". ಅವ್ರು - ಇವ್ರು ಹೋಗಿ ನಾ - ನೀ ಶುರು ಆಗ್ತದ. "ಮಕ್ಕಳು ನನ್ನೂ ಅಷ್ಟ ಏನ್? ನಿನ್ನೂ ಅಲ್ಲೇನ? ಸ್ನಾನಕ್ಕ ಹಾಕು, ಊಟಾ ಮಾಡಸು, ಮಲಗಸೂ". "ಬರೇ ನಾನ ಆಡಗೀ ಮಾಡ್ಬೇಕೇನು, ನೀನೂ ಮಾಡು" ಅಂತ home minister ಶುರು ಮಾಡ್ತಾರ. ಪಾಪಾ ತಪ್ಪು ಹೆಂಡತಿದಲ್ಲಾ, ಆ ಸುಡಗಾಡ Virus ದು. ಇವರನ್ನ ಒಂದ ಮನ್ಯಾಗ ಕೂಡಿ ಹಾಕ್ಯದ. ಇನ್ನ ಶಿಟ್ಟ ಬಂದ್ರ ಯಾರ್ ಮ್ಯಾಲೆ ತಗೀಬೇಕು. ಗಂಡಾ - ಇಲ್ಲಾ ಮಕ್ಳು. ಮಕ್ಳು ತಮ್ಮೂ ಇರ್ತಾವ, ಅವಕ್ಕ ಅಂದ್ರ ತಾವ ಅವನ್ನ ಸಮಾಧಾನ್ ಮಾಡಬೇಕು, ಅದಕ್ಕ easy target ಅಂದ್ರ, "ಅತ್ತೀ ಮಗಾ".... ಆ virus ಅನ್ನಕೋತಿರ್ತದ, "ನಾ Attack ಮಾಡೋದ ಬ್ಯಾಡ, ತಾವ ಬಡದಾಡಕೋಂಡು ಸಾಯ್ತಾರ". So much sensible Virus!!!
ಇನ್ನ, ಇಷ್ಟ ದಿವಸ ಮನ್ಯಾಗ ಇದ್ದ ಮ್ಯಾಲೆ ಹ್ಯಾಂಗರೆ entertainment ಮಾಡಕೊಳ್ಳ ಬೇಕಲ್ಲಾ? ಈ ಹೇಂಡಂದ್ರಿಗೆ ಗಂಡನ್ನ ಮಾರಿ ಒಂದ ವಾರಕ್ಕ ಬ್ಯಾಸ್ರಾಗ್ತದ. ಅವ್ರಿಗೆ ಬಾಜು ಮನೀ ಪದ್ದಕ್ಕನ ಜೊತಿ ಹರಟೀ ಹೊಡೆಯೋದು, ಏಂದೂ ಕೇಳದ್ದ ದೂರದ್ದ ಕಾಕಾನ ಮಗ್ಗ phone ಹಚ್ಚಿ "ಹ್ಯಾಂಗ ಇದ್ದೀ?" ಅಂತ ಕೇಳೋದು. ಆ phone ಕೇಳ್ಯ ಅವಾ ಗಳಾಗಳಾ ಅತ್ತ ಬಿಟ್ಟಿರ್ತಾನ. ಅಂಥಾ ಪ್ರೀತೀ ಅಕ್ಕಾ - ತಮ್ಮಂದು!!! ಇಷ್ಟಕ್ಕ ಸುಮ್ಮನ ಆಗಂಗಿಲ್ಲಾ ಅವ್ರ ಪ್ರೀತಿ, ಅದನ್ನ social media ಕ್ಕೂ ವೈತಾರ. ಇಬ್ಬರ್ದು ಯಾವದೋ ಒನ್ದು ಹಳೇ ಕಾಲದ್ದ ಫೋಟೋ ಹಾಕಿ "Felt like heaven after talking to my Brother!!!" ಅಂತ tag ಮಾಡ್ತಾರ. ಆಜು ಬಾಜು ಮನೀ ಹೆಂಗ್ಸುರು ಎಲ್ಲಾ ಸೆರಿ, Facebook ಮ್ಯಾಲೆ, ಎನೇನೋ ಆಟಾ ಆಡ್ತಾರ. ನನ್ನಾಕಿನೂ ಏನೋ ಒನ್ದರೋಳಗ ಭಾಗ ವಹಿಸಿದ್ಲು. "ಸಾರೀ ಚಾಲೇಂಜ" (#SareeChallenge) ... Sorry ಹೇಳೋ ಚಾಲೇಂಜ ಅಲ್ಲಾ ಅದು. ಆಕೀ ಎಂದೂ ನನಗ Sorry ಹೇಳೋದ ಇಲ್ಲಾ. ಆ ಚಾಲೇಂಜದಾಗ ಯಾವಾಗ್ಲೂ ನಾನ ಗೆಲ್ಲತೀನೀ. ಆಕೀದು "ಶೀರೀ ಉಟ್ಟಕೊಳ್ಳೊ ಚಾಲೇಂಜ". 10 - 20 ಹೆಂಗಸರನ್ನ tag ಮಾಡತಾರ, ನಿಮ್ಮದೂ photo ಹಾಕ್ರಿ ಅಂತಾರ. ಈ ಗಂಡಸರಿಗೇ, ಇಂಥಾವೆಲ್ಲಾ ಬರೂದ ಇಲ್ಲಾ. ತಮ್ಮ ಲೋಕದಾಗ ತಾವ ಇರ್ತಾವ. ಕೋರೋನಾ ಬಂದಾಗಿಂದ, ನಮ್ಮ ಲೋಕಾ ಸಣ್ಣದಾಗಿ ಬಿಟ್ಟದ. ನನಗ ಭಾಂಡೆ ತಿಕ್ಕೋದು, ಅರ್ವೀ ವಗ್ಯೋದು ಇವ ಕೆಲಸಾ ಇರ್ತದ. ಅನ್ನಕೊಌ ಕತ್ತಿದ್ದೆ ನಾನು, ಯಾಕ ನಾನು ನನ್ನ ದೋಸ್ತರ ಹೆಸರ ಹಾಕಿ, #ಭಾಂಡೆ_ತಿಕ್ಕೋ_ ಚಾಲೇಂಜ ಅಥವಾ #ಅರ್ವೀ_ವಗ್ಯೋ_ ಚಾಲೇಂಜ ಅಂತ ಕರೀಬಾರ್ದು ಅಂತ? ನನ್ನ ಹೆಂಡತೀ ಫೋಟೋಕ್ಕ ಎಷ್ಟು like ಸಿಗತಾವೋ, ಅದಕ್ಕೂ ಜಾಸ್ತಿ ನನಗ hate ಸಿಗತಿದ್ವು ಎನೋ...
ವಿಚಾರ ಮಾಡಿದ್ರ, ಕೋರೋನಾ ನಮಗ ಭಾಳಷ್ಟು ತಿಳಿಸಿ ಕೊಟ್ಟದ. ಈಗ ಎಲ್ಲಾರಿಗೂ ಭಾಳ time ಅದ, ಕೂತು (ಯಾವಾಗ್ಲೂ ಕೂತೇ ಇರ್ಬ್ಯಾಡ್ರಿ) ವಿಚಾರಾ ಮಾಡ್ರಿ. ನಿಮ್ಮ ಶಿಸ್ತಿನ ಜೀವನದ ಬಗ್ಗೆ ಎಲ್ಲಾರೂ ಹೇಳ್ರಿ.
ಇಂತಿ, ನಿಮ್ಮ
V
ಭಾಳ ಛಂದದ ಬರಹ.
ReplyDeleteMast bardieeri. Keep writing.
ReplyDeleteSuper ವೇಣು ಅಣ್ಣ 👌
ReplyDeleteHow to get to Mohegan Sun Arena - DRMCD
ReplyDeleteThe cheapest 충주 출장마사지 way to get from 정읍 출장마사지 Mohegan Sun Arena to Mohegan Sun Arena 평택 출장마사지 costs only $7, and the 과천 출장샵 quickest way takes 창원 출장샵 just 16 mins.
After a few of} test runs within the fall of 2011—"Small money," she says, "we made $200,000 at Palms, $300,000 우리카지노 at MGM"—she put the massive play into motion contained in the Salon Privé personal gaming room at Aria. Kelly and three collaborators established themselves as dropping players by dropping $100,000 half in} the game straight and dropping it all. The next day they came back, deposited $500,000 and asked to play "Macau style." The on line casino acquiesced. Four cards had been dealt earlier than Kelly and crew made their bets.
ReplyDelete