Posts

Showing posts from 2020

ಕೋರೋನಾ... ಕೋರೋನಾ...

Image
2020 January ತಿಂಗಳ ಕೊನೀ ತನಕಾ, ಕೋರೋನಾ ಅಂದ್ರ ಜಗತ್ತಿನ ಬಹುತೇಕ ಜನಕ್ಕ ಬೀರ್ ಅನ್ನೋದು ಒನ್ದ ಗೊತ್ತಿತ್ತು.   ಯಾವದರೇ ಪಬ್ಬಿಗೇ ಹೋಗಿ, "ಕೋರೋನಾ" ಅಂತ ಅಂದ್ರ, ಒಂದು ಛಂದ ಅನಿ ಬಾಟಲ್ಯಾಗೋ ಅಥವಾ ಗ್ಲಾಸ್ನಾಗೋ, ತುಂಬಿ ತುಳಕೋ ಹಾಂಗ ಬೀರ್ ಸರಬರಾಜ್ ಆಗತಿತ್ತು. ಅದು ಕೋರೋನಾದ್ ಸಣ್ಣ ಪರಿಚಯ, ಜಗತ್ತಿನ ಒನ್ದು ಗುಂಪಿನ ಜನರಿಗೆ ಅಷ್ಟ. ಬ್ಯಾರೆ ಜನಕ್ಕ ಅದರ ಗಂಧಗಾಳೀನು ಇರ್ಲಿಲ್ಲ.   ಆಮ್ಯಾಲೆ February ಇಂದ ತಿಳೀತು, ಕೋರೋನಾ ಒನ್ದ್ virus ಅಂತ. ಅದೂ ಪ್ರಾಣಾಂತಿಕ  virus !!! ಅಂದ್ರ, ಸುಮ್ಮನ ಇದ್ರ, ನಮ್ಮ ಪ್ರಾಣಾನು ತಗೀತದ!!! ತಗೋನೀ, ಇಡೀ ಜಗತ್ತಿಗೇ ಗೊತ್ತಗಿ ಹೋತ್, ಈ " ಕೋರೋನಾ " ಅಂದ್ರ ಏನ್ ಅಂತ... ಇಲ್ಲೆ, ನಾ ಕೋರೋನಾ ಯಾವ ದೇಶದಿಂದ ಬಂತು, ಅದರಿಂದ ಯಾರಿಗೆ ಏನ್ ಆತು, ಅದರಿಂದ ಹ್ಯಾಂಗ ಬಛಾವ್ ಆಗ್ಬೇಕು ಅನ್ನೋ serious ವಿಷಯದ ಬಗ್ಗೆ ಏನು ಬರಿಯಂಗಿಲ್ಲಾ. ಯಾಕಂದ್ರ ಅದರಬಗ್ಗೆ ಬರೀಲಿಕ್ಕೆ, ಹೇಳಲಿಕ್ಕೆ , ಪ್ರಚಾರ ಮಾಡಲಿಕ್ಕೆ, ಭವಿಷ್ಯ ತೋರಿಸಲಿಕ್ಕೆ, ಅದರ interview ತಗೋಳಿಕ್ಕೆ ಭಾಳಷ್ಟು ಮಂದಿ ಇದ್ದಾರ್ ಮತ್ತ ಹುಟ್ಯಾರ, ಹಾಂಗ ಹುಟ್ಕೋತಾರ. ಇಲ್ಲೆ ನಾ ಬರಿಯೋದು ಭಾಳಾ simple. ಕೋರೋನಾದಿಂದ ಆದ ಆಜು ಬಾಜು ಪರಿಣಾಮ. (English ನಾಗ side effects). ಅದು ಮನ್ಶನ್ ಆರೋಗ್ಯದ ಮ್ಯಾಲೆ ಅಲ್ಲಾ, ಅಂದ್ರ ಡಾಕ್ಟರ್ ಏನ್ ಅಂದ್ರು, ಏನ್ ಔಷಧಿ ಕೊಟ್ರು, ಎಲ್ಲಿ ಮಲಕ್ಕೋ ಅಂದ್...