ಹೆಸರಾಗ ಏನದ?


"ಏ ರಾಜಾ, ಏ ತಮ್ಮಾ ... ಬಾ ಇಲ್ಲೆ", "ಏ ಗುರು"... "ಚಿ... ಚಿ..., ಬಾ ಇಲ್ಲೆ" ಅಂತ ಬ್ಯಾರೇ ಬ್ಯಾರೇ ಜನಾ ಕರ್ಯೋದನ್ನ, ನಮ್ಮ ಧಾರವಾಡದ ಹೊಟೇಲಗ ಹೋದಾಗ ಕೇಳಲಿಕತ್ತಿತ್ತು. ನಾನು ಒಬ್ಬನ್ನ ಕರದ ಬಿಡೋಣ ಅಂತ ಹೇಳಿ, ಜೋರ್ ಆವಾಜದಾಗ, "ಏ Hero, ಬಾ ಇಲ್ಲೇ" ಅಂತ ಕರದೇ. "Heroಶಬ್ದ ಕೇಳಿ, ಆ 18 - 20 ವರ್ಷದ ಹುಡುಗಾ, ಓಡಕೋತ ನನ್ನ ಹತ್ರ ಬಂದು, ನೀರಿನ ವಾಟಗಾ ಇಟ್ಟು, "ಏನ್ ಬೇಕ್ರಿ ಸರSS..." ಅಂತ ರಾಗಾ ಎಳದಾ. ನನಗ "ಸರ್...ಅನ್ನಿಸಕೊಂಡ ರೂಢಾ ಇಲ್ಲ. ಸರ್ ಅಂದಕೂಡಲೇ, ಆಜು ಬಾಜು ನೋಡಲಿಕತ್ತೆ. ನಮ್ಮ ಸಾಲಿ ಮಾಸ್ತರ್ ಯಾರರೆ ಇದ್ದಾರೇನು ಅಂತ. ಸ್ವಲ್ಪ, ತಡವರಿಸಿದ್ಮ್ಯಾಲೆ ಗೊತ್ತಾತು, ಆ ಮಹಾನಾತ್ಮಾ (Great Soul in ಕನ್ನಡಾ) ನಾನ ಅಂತ. "ಹುಃ, ತಗೋರಿಪಾ", ಅಂತ ನನ್ನ Normal order ಕೊಟ್ಟೆ. ನನ್ನ ತಿಂಡಿ ಕಟದ ಮ್ಯಾಲೇ, ಹೊರಗ ಹೋಗಿ ಪಾನ ಹಾಕೊಳಿಕತ್ತಿದ್ದೆ. ಅಲ್ಯೂ ಜನಾ, ಪಾನ್ ಮಾಡಾವನ್ನ "ಏ ರಾಜಾ, ಏ ತಮ್ಮಾ.... ಮಸಾಲಾ ಪಾನ್ ಕಟ್ಟು", "ಏ ಗುರು... ಅಂಬಾಡಿ ಎಲಿ ತಾ". ಈ ರಾಜಾ, ತಮ್ಮಾ, ಗುರು... ಎಲ್ಲಾ ಒಬ್ಬವನ್ದ ಹೆಸರೇನಪಾ? ಒಬ್ಬ ಮನಷಾಗ ಎಶ್ಟರೇ ಹೆಸರು ಇರ್ತಾವಪಾ ಅಂತ ನನ್ನ ಪಾನ್ ಮೇಕೋತ, ತಲಿಗೆ ಕೆಲಸಾ ಕೊಟ್ಟೆ. ಪಾನ ತಿನ್ನೋಬೇಕಾರ ನನ್ನ ತಲೀ ಭಾಳ active ಇರ್ತದ. ಅದಕ್ಕ ಕ್ಲಿಷ್ಟದ (difficult in ಕನ್ನಡಾಕೆಲಸಾ ಆವಾಗ ಕೊಡೋದು. 

ನನ್ನ ತಲೀ, 4 ನೇತ್ತೇ ಕನ್ನಡ ಸಾಲಿ memory ಒಳಗ ಜಾರಿ ಬಿಡ್ತು. ಅಲ್ಲೇ, "ನಾಮ ಪದ" ಅಂದ್ರ "Noun in English" (ಇದನ್ನ English ದಾಗ ಹೇಳೋದ ಛೊಲೋ), ಹೇಳಿ ಕೊಟ್ಟಿದ್ರು ಕನ್ನಡ ವ್ಯಾಕರಣದಾಗ. ( Grammer in ಕನ್ನಡ ). 4 ನೇತ್ತೇಗ ನನಗಿನ್ನ ಛಂದಾಗಿ ಕನ್ನಡ ಬರೀಲಿಕ್ಕೇ ಬರ್ತಿಲಿಲ್ಲ್, ಇನ್ನ ನಾಮಪದಾ, ಗೀಮಪದಾ ಎಲ್ಲಾ ದೇವರಪದಾ ಇದ್ದಹಾಂಗ. ದೇವರಪದಾ, ಅನ್ನಲಿಕ್ಕರೆ ಬರ್ತದ ಆದ್ರ ತಿಳಿಯಾಂಗಿಲ್ಲ. ಕಲತದ್ದು ತಿಳಿಬೇಕಂದ್ರ, ಅದ್ರದು ಉಪಯೋಗ ಆಗ್ಬೇಕು, ಇಲ್ಲಂದ್ರ ತಿಳಿಯಂಗಿಲ್ಲಾ. ತಿಳಿಲಿಲ್ಲಂದ್ರ ಕಲಿಯಂಗಿಲ್ಲಾ. ತಿಳೀತೊ ಇಲ್ಲೋ? ಸ್ವಲ್ಪ ಸಂಬಂಧ ಹೇಳ್ತೇನಿ, ಕೇಳ್ರಿ. ನಾನು, Engineering ದಾಗ ಕಲ್ತದ್ದು ಅರ್ಧಕ್ಕರ್ಧ ತಿಳಿದಿರಲಿಲ್ಲಾ, ಇನ್ನ ಅರ್ಧಕ್ಕ ಅರ್ಧ ಉಪಯೋಗಸಲಿಕ್ಕೆ ಬರಂಗಿಲ್ಲ. So, ಕಲ್ತಿದ್ದರ ಪಾವುಣಾ ಅಷ್ಟ ಉಪಯೋಗಸೋದು, ಜೀವನಕ್ಕ. ಹೌದಿಲ್ಲೋ? ಎಲ್ಲಾ engineers ತಲೀ ಆಡಸಲಿಕ್ಕತ್ತಿರೆನು? ಮತ್ತ ವ್ಯಾಕರಣಕ್ಕ ಬರೋಣಂತ. 4 ನೇತ್ತೇದಾಗ ಕಲಿಸಿದಾಗ, ನನಗ ಏನೂ ತಿಳಿದಿರಲಿಲ್ಲ ಅಂತ ಒಪ್ಪಕೋಂಡೆ, ಆದ್ರ ಈಗ ಹೇಳಿಕೊಡಾವ್ರು ಯಾರು ಅಂತ ತಲಿ ತುರ್ಸಕೊಌಕತ್ತಿದ್ದೇ... ಆಗ ಟಿಂಗ ಅಂತ Google ಗುರು ನನ್ನ mobile ನಾಗ ಪ್ರತ್ಯಕ್ಷ ಆಗೇ ಬಿಟ್ರು. Google ಗುರುಗಳಿಗೆ ಗೊತ್ತಿಲ್ಲಾ ಅಂದ್ರ ಯಾರಿಗ ಗೊತ್ತಿರ್ತದ? ಅಷ್ಟೋತ್ತಿಗೆ ನನ್ನ "ಸಹಧರ್ಮಿಣಿ" ( ಇದೂ Wife ಗ ಇನ್ನೋಂದ ಹೆಸರು) ಬಂದ್ಳು ಹೊರಗಿಂದ ಗುರ್ ಗುರ್ ಅನ್ನಕೋತ. ಆಹಾ... ನನ್ನ permanent ಗುರು... ಅಂತ ಕಣ್ಣ ಮುಚ್ಚಕೋಂಡ ಕುತ್ತಬಿಟ್ಟೆ. ಇರ್ಲಿ, ನನ್ನ Google ಗುರುಗಳಿಗೆ ಕೇಳಿದೆ, ಪುಣ್ಯಾಕ್ಕ ಅವ್ರಿಗೆ ಗೊತ್ತಿತ್ತು "ನಾಮ ಪದ" ಬಗ್ಗೆ. So, ನಾ permanent ಗುರು ಕಡೆ ಹೋಗ್ಲೇ ಇಲ್ಲ. 

Google ಗುರುಗಳು, ನಾಮಪದದ್ದ ವಿಭಾಗ ಹೇಳಿಕತ್ರು... ಅಂದ್ರ classification. ಹೊಗ್ಗೋ ನಿನ್ನ, ಮೊದಲ ನಾಮಪದಾನ ತಿಳಿಯಾಂಗಿಲ್ಲ, ಇನ್ನ ಅದರ ವಿಭಾಗ ಬ್ಯಾರೆ ಕೇಡ. ಇರ್ಲಿ, ಏನ್ ಹೇಳ್ರಿ ಅಂತ ಕೆಳಲಿಕತ್ತೆ. 
  • ಅಂಕಿತನಾಮ
  • ರೂಢನಾಮ
  • ಅನ್ವರ್ಥಕ ನಾಮ
ನಾನೂ ಕೂಡಿಸೇಬಿಟ್ಟೆ, "ಏನು ತಿಳಿಲಿಲ್ಲಂದ್ರ ಪಂಗನಾಮ". ಈ Google ಗುರುಗಳು ಏಷ್ಟು ಛಂದ ಹೇಳಿದ್ರಂದ್ರ, ನನ್ನೋಳಗಿನ ವ್ಯಾಕರಣಕಾರ ಹೊರಗ ಬರ್ಬ್ರೇಕಂತ Hritik Roshan ಗತೆ ಕುಣಿಲಿಕತ್ತ. Step ಹಾಕಲಿಕತ್ತಿರಿಲ್ಲೋ? ನನ್ನ curiocity ಮುಚ್ಚಿ ಇಡಲಿಕ್ಕ ಆಗವಾಲ್ತು. ತಗೋರಿ, ಹೊಸಾ ನಾಮಪದದ್ದ ವಿಭಾಗ add ಮಾಡಲಿಕ್ಕೆ ನಾಂದಿ ಹಾಕೇಬಿಟ್ಟೆ. ನನ್ನೂ ಹೋಸಾ ನಾಮ ಪದಾ - 
  • ಸಾಂಧರ್ಭಿಕ ನಾಮ
  • ಚಿಕ್ಕನಾಮ/ಚೋಕ್ಕ ನಾಮ
  • ಘನಕಾರ್ಯ ನಾಮ
Lets start with Contextual Name ಅಂದ್ರ, ಸಾಂಧರ್ಭಿಕ ನಾಮ. ನನ್ನ ಅಮ್ಮಾ"ರೀ... ಏನ್ರೀ"... ಅಂತ ಕರೀಲಿಕತ್ತಿದ್ಲು. ನನ್ನ ಮಗಾ ಆಟಾ ಆಡಕೋತ ಕುತ್ತಾವ, ತಲಿ ಎತ್ತಿ ತನ್ನ ಅಜ್ಜಿನ್ನ ಕೆಳಿದಾ... "who is this ರೀ... ಅಜ್ಜಿ?". ಪಾಪಾ ಆಕಿ ಕಕ್ಕಾಬಿಕ್ಕಿ ಆಗಿ ನನ್ನ ಕಡೆ ನೋಡಿದ್ಲು. ನಾನು ನನ್ನ ಮಗ್ಗ ಹೇಳಿದೆ, ಆಕಿ ಅಜ್ಜಾನ್ನ ಹಾಂಗ ಕರೀತಾಳ ಅಂತ. ಯಾಕಂದ್ರ, ನನ್ನ ಅಮ್ಮಾ, ಅಜ್ಜಿ ಎಲ್ಲಾ, ಅವರ ಗಂಡದ್ರನ್ನ "ರೀ... ಏನ್ರೀ" ಅಂತ ಕರಿತಿದ್ರು. ಅದು ಈಗ ವಿರಳ ಆಗ್ಯದ. ಕಾಡನ್ಯಾಗ ಹ್ಯಾಂಗ ಹುಲಿ endagered ಆಗ್ಯಾವೋ ಹಾಂಗ ಮನ್ಯಾಗ ಹುಲಿನೂ.. ಹೂಃ... ತಿಳಿತಿಲ್ಲೋ? ಈಗಿನವ್ರು ತಂ ಗಂಡನ್ನ ಹೆಸರ ಹಿಡದ ಕರೀತಾರ ಇಲ್ಲಾ ಅವರಿಗೋಂದ nick name ಇರ್ತದ. ಇರ್ಲಿ, ಇಲ್ಲೇ point ಏನ ಅಂದ್ರ, "ರೀ... ಏನ್ರೀ" ಅನ್ನೋದು ಅವರವರ ಗಂಡಂದ್ರಿಗೆ ಅಷ್ಟ ತಿಳಿತದ. ಮೊನ್ನೆ ನನ್ನ ತಮ್ಮನ ಮದ್ವ್ಯಗ 10 - 20 ರೀ... ಏನ್ರೀ ಗಳು ಬಂದಿದ್ರು, ಅಂದ್ರ ನನ್ನ ಕಾಕಾ, ಮಾಮಾ, ದೊಡ್ಡಪ್ಪಾ ಹೀಂಗ ತುಂಬಿದ ಕುಟುಂಬಾ. ಅಲ್ಲೆ ಅವರವರ ಹೆಂಡಂದ್ರು ಅವರನ್ನ ಕರ್ಯೋ ಪಧ್ಧತಿ. ಇಲ್ಲೇ, ಮಜಾ ಎನಂದ್ರ, ಯಾರರೆ "ರೀ - ಏನ್ರೀ" ಅಂತ ಕರದ್ರ, ಅವು correct ಗಂಡಂದ್ರಿಗೆ ತಿಳಿತಾವ. ಬ್ಯಾರೆದಾವ್ರಿಗೆ ತಲ್ಯಾಗ ಹೋಗಾಂಗಿಲ್ಲಾ. ನನ್ನ ಮಾಮಿ ಒಬ್ಬಾಕಿ ಮಾಮಾನ್ನ ಕರದ್ಲು ಹಾಂಗ "ರೀSSS...." ಅಂತ, ನನ್ನ ಮಾಮಾ "ಬಂದೇ..." ಅಂತ  ಡಬಡಿಸಕೋಂಡ ಎದ್ದ ಓಡಿ ಹೋದಾ. ಅಬ್ಬಾ, ಎನ್ powerfull ಅದ ಈ ಶಬ್ದಾ? ನಿಮ್ಮ ಹತ್ರ ಎನರೇ Contextual Name / ಸಾಂಧರ್ಭಿಕ ನಾಮ ಅವ ಏನು?


ಇನ್ನ ನಮ್ಮ U.K ಮಂದಿಗೆ Chemistry ದಾಗ ನೂರಕ್ಕ ನೂರ ತಗೊತಾರ, confused? ಕೇಳ್ರಿ ಇಲ್ಲೆ. ನಾ 9 ನೇತ್ತಾಕ್ಕ ಇದ್ದಾಗ, ಆವರ್ತಕ ಕೋಷ್ಟಕ ಅಂದ್ರ Periodic table ನ ಕಲಿಸಿದ್ರು. ಯಾಕ ಕಲಿಸಿದ್ರ, ಏನ ಕಲಿಸಿದ್ರು ಅಂತ ಗೊತ್ತಿಲ್ಲಾ. ಅಲ್ಲೆ, ಈ ಎಲ್ಲಾ elements ನು ಒಂದು ಛಂದ ರೀತಿ ಇಂದ, ತಿಳಿಯೋಹಂಗ arrange ಮಾಡಿ ಇಟ್ಟಾರ ನಮ್ಮ ವಿಜ್ಞಾನಿಗಳು, ಈ ನನ್ನಂಥಾ ಅಜ್ಞಾನಿಗಳ ಸಲ್ವಾಗಿ. ಈಗ ಬಂಗಾರ ತಗೋರಿ, ಅದಕ್ಕ ಅವ್ರು "Aurum" ಅಂತ ಹೆಸ್ರು ಇಟ್ಟಾರ. ಇನ್ನ ಕರಿಲಿಕ್ಕೆ ಸರಳ ಆಗ್ಲಿ ಅಂತ, "Au" ಅಂತಾರ. So, ಇಂಥ ಕಷ್ಟದ ಹೆಸರು, ಸರಳ ಮಾಡಿ ಹೇಳೋದು ನಮ್ಮ U.K ಮಂದಿಗೆ "ಕರತಲಾಮಲಕ" (expertise ಅಂತ ಅರ್ಥ) ಆಗಿಬಿಟ್ಟದ. ಅದ ಹ್ಯಾಂಗೋ ವೇಣು ಅಂದ್ರ? ಕೇಳ್ರಿ ಇಲ್ಲೆ... ಒಬ್ಬವನ್ನ ಹೆಸ್ರು "ಪುಂಡಲೀಕ" ಅಂತ ಅದ ಅನ್ನಕೋರಿ, ಅವನ್ನ ನಮ್ಮ ಮಂದಿ ಕರ್ಯೋದು... "ಪುಂಡ್ಯಾ". ಈಗ ನಂದ ಹೆಸರ್ ತಗೋರಿ, "ವೇಣುಗೋಪಾಲಾ", ಕರ್ಯೋದು... "ವೇಣ್ಯಾ".  ಅದಕ್ಕ್ ನನ್ನ ಹೆಸ್ರು, V ಅಂತ ಇಟ್ಟ ಬಿಟ್ಟೆನಿ. ಹೂನಪಾ, ಈಗ ಇಬ್ರ ಹೆಸ್ರು same ಇತ್ತಂದ್ರ ಏನ ಮಾಡ್ತಿ? ಅಂದ್ರ, ಈಗ "ಗಿರೀಶ" ಅಂತ ಹೆಸ್ರು ಇದ್ದಾಂವಗ "ಗಿರ್ಯಾ" ಅಂತ ಕರೀತಿವಿ, ಇಬ್ರು ಗಿರೀಶ ಇದ್ರ? Conflict resolution ದಾಗ ನಂ ಮಂದಿದು ಎತ್ತಿದ ಕೈ. Simple, "ಉದ್ದ ಗಿರ್ಯಾ" , "ಗಿಡ್ಡ ಗಿರ್ಯಾ". ಅದರೊಳಗ ಯಾರರೇ ಚಶ್ಮಾ ಹಾಕೋತಿದ್ರ, ಮುಗಿತ ಅವನ ಕಥಿ... ಅವನ ಹೆಸ್ರು "ಕುಡ್ಡ ಗಿರ್ಯಾ"... ಹೇ ಹೇ... ನಂ ಮಂದಿ ಭಯಂಕರ ಸೃಜನ ಶೀಲರು ( Creative in ಕನ್ನಡಾ). ಅದ, ಹುಡಗ್ಯಾರಿಗೆ ಹಾಂಗ ಕರ್ಯಾಂಗಿಲ್ಲ. "ತನ್ವಿ" ಅಂತ ಹೆಸರು ಇದ್ರ, "ತನು" ಅಂತ ಕರೀತಿವಿ. "ಪ್ರಜ್ಞಾ" ಅಂತ ಹೆಸರು ಇದ್ರ "ಪ್ರಜ್ಞೀ" ಅಂತ. ಇದೆಲ್ಲಾ pattern ನೋಡಿದ್ರ, ಒಂದೆರಡು ಸೂತ್ರನ  (Formula in ಕನ್ನಡಾ) ಬರೀಬಹುದು. ಅದಕ್ಕ ಇನ್ನೋದ topic ಮಾಡೋಣಂತ. ಈಗ ಇಂಥ ಹೆಸರಿಗಿ, ಚಿಕ್ಕನಾಮ/ಚೋಕ್ಕ ನಾಮ ಇಲ್ಲಾ Short Name/ Sweet Name


ಮೊನ್ನೆ ನನ್ನ ಹೆಂಡತಿ ಮತ್ತ ಮಗಾ ಎಲ್ಲೋ ಹೊರಗ ಹೋಗಿದ್ರು. ಅಲ್ಲೆ ಯಾರೋ ಪರಿಚಯ ಇದ್ದವ್ರು ಸಿಕ್ಕಿದ್ರಂತ ಅಕಿಗೆ. ನಾ ಇಲ್ಲದ್ದನ್ನ ನೋಡಿ, ಕೇಳ್ಯಾರ ಆಕಿಗೆ, "ಎಲ್ಲೆ ಲೇಖಕರು?". ಪಾಪ ನನ್ನ ಸಹಧರ್ಮಿಣಿಗೆ ಇಷ್ಟೋಂದು heavy ಕನ್ನಡಾ ತಲಿ ಮ್ಯಾಲಿಂದ bounce ಆಗ್ತಾವ. ಅಲ್ಲೆ ಆಕಿ ಸುಮ್ಮನ ನಕ್ಕು ಮನಿಗೆ ಬಂದು, ಹವುರ್ಗ ನನಗ ಕೇಳಿದ್ಲು, "ಈ ಲೇಖಕರು ಯಾರು ನಮ್ಮ ಮನ್ಯಾಗ?". ನಾನು, ನನ್ನ permanent ಗುರುಗಳು ಏನೋ ಕೇಳಿದ್ರು ಅಂತ, ಖುಷಿ ಪಟ್ಕೋಂಡೆ. ಅತೀ, ವಿನಯವಂತನಾಗಿ, ನನ್ನ ಗುರುಗಳಿಗೆ ಹೇಳಿದೆ, "ನೋಡು, ಈಗ ನಾನು blog ಬರೀತೀನಿ ಅಲ್ಲಾ, ಅದನ್ನ ಓದಿದವ್ರು, ಕೇಳಿದವ್ರು, ನನಗ ಲೇಖಕರು ಅಂತಾರ. ಯಾಕಂದ್ರ ನಾ ಏನೋ ಘನ ಕಾರ್ಯ ಮಾಡೇನಿ ಅವರ ಪ್ರಕಾರ", ಅಂತ ಸಣ್ಣ ಭಾಷಣಾ ಜಡದ ಬಿಟ್ಟೆ. ಮೌಕಾ ಮಿಲ್ತೇಹೀ, ಚೌಕಾ ಮಾರದೋ, ಇದು ನನ್ನ formula. ಆದ್ರ, ಒಂದ ವಿಚಾರ ಇಲ್ಲೆ, ಈ Out of scope ಕೆಲಸಾ ಮಾಡವ್ರಿಗೆ, ಅವರ ಕಾರ್ಯದ ಮ್ಯಾಲೇ ಅವರನ್ನ ಗರತಿಸ್ ತೇವಿ. ನನ್ನ ತಮ್ಮ college ಹೊಗ್ತಿದ್ದಾಗ, ಅವನ friend ಒಬ್ಬಾವ ಇದ್ದ. ಆವಾಗ ಆವಾಗ ಮನಿಗೆ ಬರ್ತಿದ್ದ. ಎನ ಕೇಳಿದ್ರು, ಗೊತ್ತದ ಅಂತಿದ್ದಾ. ನಾಟಕಾ, ಹಾಡು, ತಬಲಾ ಬಾರಸೋದು, ಮಿಮಿಕ್ರಿ ಮಾಡೋದು... anything and everything, ಅವಂಗ ಗೊತ್ತಿತ್ತು. ಈಗ ನಾವು ಸಾಲಿ ಒಳಗ, "ಕವಿ ಕೃತಿ ಪರಿಚಯ" ಒಳಗ, "ಆಡು ಮುಟ್ಟದ ಸೊಪ್ಪಿಲ್ಲ, ..... ಮಾಡದ ಕೆಲಸಾ ಇಲ್ಲಾ", ಹಾಂಗ ಈ ಹುಡುಗಾ. ಅವನ ದೋಸ್ತರೆಲ್ಲಾ, ಅವನ ಈ talent ನೋಡಿ, "Multi" ಅಂತ ಹೆಸರ್ ಇಟ್ರು. ಕರ್ಯೋದು ಹಾಂಗ, "ಏ Multi, ಬಾ ಇಲ್ಲೇ". ಹಾ ಹಾ... ಇಂಥಾ ಭಾಳ ಹೆಸರು, ಬರ್ತಾವ. ನಿಮಗ ಏನ್ರೆ ಗೊತ್ತಿದ್ರ comment ಮಾಡಿ ಹೇಳ್ರಿ. ಈ ರೀತಿ ಹೆಸರಿಗೆ ಘನಕಾರ್ಯ ನಾಮ ಅಂತ ನಾಮಕರಣ ಮಾಡಿದೆ. 

ಈ ಎಲ್ಲಾ ನಾಮಪದಾನ್ನ, ಕನ್ನಡ ವ್ಯಾಕರಣದಾಗ ಸೆರಸ್ ಬೇಕಂತ ಗುದ್ಯಾಡಲಿಕ್ಕತ್ತೇನಿ, ನಿಮ್ಮ ಪ್ರೊತ್ಸಾಹ, ಸಹಾಯಾ ಬೇಕು. ನೀವು, ಹೊಸಾ ಹೊಸಾ ವಿಚಾರ ಹುಟ್ಟ ಹಾಕಿ, "ಕನ್ನಡಾ ಉಳಿಸಿ, ಕನ್ನಡಾ ಬೆಳಿಸಿ" ಒಳಗ participate ಮಾಡ್ರಿ.

ಒಂದು ಮುಖಕ್ಕ, ಒಂದ ಹೆಸರು ಇರ್ಬೇಕಂತ ಏನೂ ನಿಯಮ ಇಲ್ಲಾ, "ಏಕ ಅಲ್ಲಾ, ಹಝಾರ್ ನಾಮ್" ಅಂಧಂಗ, "ಏಕ್ ಇನ್ಸಾನ್, ಹಝಾರ್ ಇಲ್ಲಾಂದ್ರೂ ದಸ ನಾಮ್ ತೊ ಹೋಂಗೇ ಹಿ?". ಇನ್ನ ಮ್ಯಾಲಿಂದ ಯಾರರೆ ನಿಮಗ "ಏನೋ, ನಿನ್ನ NOUN?" ಅಂತ ಕೇಳಿದ್ರ, ಅವರು ನಿಮ್ಮ ಹೆಸರನ್ನ ಕೇಳಿಕತ್ತಾರ ಅಂತ ತಿಳಕೊಳ್ರಿ. ಆವಾಗ, ನೀವು ನಿಮ್ಮ ಹೆಸರಾಗ ಏನ ಅದ ಅಂತ ವಿಚಾರ ಮಾಡಿ ಉತ್ರಾ ಕೊಡ್ತಿರಿ? Comment ಮಾಡಿ ಹೇಳ್ರಿ.

ಇಂತಿ, ನಿಮ್ಮ....
V

Comments

  1. Nam keyboards saali adda herar kariyak famous...le Sammya dikya athanya lolya makarya...kubya....list goes on

    ReplyDelete

Post a Comment

Popular posts from this blog

ಕೋರೋನಾ... ಕೋರೋನಾ...

ಛಾ...