ಛಾ...
ಒಂದ ಶನಿವಾರ, ಮಟಾ ಮಟಾ ಮಧ್ಯಾನ್ನಾ, ಶೀನೇಮಾ ನೋಡಕೋತ ಕುತ್ತಿದ್ವಿ, ನಾನು ಮತ್ತ ನನ್ನ ಅರ್ಧಾ"ಅಂಗಿ" (Normal ಭಾಷಾದಾಗ wife ಅಂತಾರ 😀). ಯಾವ ಶೀನೇಮಾ ಅದು.... ಹಾಂ... ನೆನಪಾತ ನೋಡ್ರಿ... PINK. ನೋಡಿರೇನು? ಅದರೊಳಗ ನಮ್ಮ "ಶೆಹನಷಾ" ಅಂದ್ರ ಅಮಿತಾಭ್ ಬಚ್ಚನ... ಅದ ನಮ್ಮ ಐಶ್ವರ್ಯಾ ಮಾವಾ?!! ಅವರ ಇದ್ದಾರ. ಏನ್ acting ಮಾಡತಾನಪಾ... ಇಷ್ಟ ವಯಸ್ಸಾದ್ರು ... ಗಿಚ್ಚ acting ಆಃ ಮತ್ತ. ಅದರಾಗ ಒಂದ scene ಬರ್ತದ. ಕೋರ್ಟ ಕೇಸ್ ಇರತದ. ಹೇಳ್ತಾರ ನಮ್ಮ ಬಚ್ಚನ್ ಸಾಹೇಬ್ರು ಜಡ್ಜಗ, “NO MEANS NO, ಯೆ ಎಕ್ ಶಬ್ದ ನಹೀ ಹೈ, ಏಕ್ ಪೂರಾ ವಾಕ್ಯ ಹೈ. ಈ dailogue ಕೇಳಿ, ಚೊಕ್ಕ ಶೀಟೀ ಹೊಡ್ಯೋದ ?!! ಏನ್ ಈ ವೇಣು filmy ಇದಾನಪಾ ಅಂತ ಅನಕೋಬ್ಯಾಡ್ರಿ. ನಾ ಒಂದು ಸ್ವಲ್ಪ Bollywood (ಹಿಂದೀ ಶೀನೇಮಾ) ನಿಂದ ಪ್ರಭಾವಿತ (Influence in ಆಡು ಭಾಷಾ) ಆಗೀನೀ. ಹೋಗ್ಲೀ, ಈ ನಿನ್ನ “ಛಾ” topic ಗೂ, Bollywood ಗೂ ಏನ್ ಸಂಬಂಧ? “ಇಮಾಮ್ ಸಾಬಿಗೂ, ಗೋಕುಲಾಷ್ಟಮೀಗೂ ಏನ್ ಸಂಬಂಧ”, ಅನ್ನೋಗತೆ, ನೀವ್ ಕೆಳೋದು correct ಅದ!!!
ಆ dialogue ಏನ್ ಅದಲಾ ಮ್ಯಾಲೆ ಶೀನೇಮಾದಾಗ, ಅದ ಹೊತ್ತಿನಾಗ ನನ್ನ ಇನ್ನೊಂದ ಅರ್ಧ (ಹೆಂಡತಿಗೆ ಇನ್ನೊಂದು ಸಮಾನಾರ್ಥಕ ಪದ)
ಕೇಳಿದ್ಲು…. “ಛಾ”. ಇದು ಪ್ರಶ್ನಾರ್ಥಕ “ಛಾ?” ನೋ, ಅಥ್ವಾ ಉದ್ಗಾರಾರ್ಥಕ “ಛಾ!!!” ನೋ ಗೊತ್ತಾಗಲಿಲ್ಲ. ಯಾಕಂದ್ರ, ಬಚ್ಚನ್ ಸಾಹೆಬ್ರು ಹೇಳಿದಂಗ ಇದು “ಯೆ ಎಕ್ ಶಬ್ದ ನಹೀ ಹೈ, ಏಕ್ ಪೂರಾ ವಾಕ್ಯ ಹೈ”. ತಿಳಿಲಿಲ್ಲ ಅಲ್ಲಾ? ಕೇಳ್ರಿ ಇಲ್ಲೆ… ಹೇಳ್ತೇನೀ...
ಕೇಳಿದ್ಲು…. “ಛಾ”. ಇದು ಪ್ರಶ್ನಾರ್ಥಕ “ಛಾ?” ನೋ, ಅಥ್ವಾ ಉದ್ಗಾರಾರ್ಥಕ “ಛಾ!!!” ನೋ ಗೊತ್ತಾಗಲಿಲ್ಲ. ಯಾಕಂದ್ರ, ಬಚ್ಚನ್ ಸಾಹೆಬ್ರು ಹೇಳಿದಂಗ ಇದು “ಯೆ ಎಕ್ ಶಬ್ದ ನಹೀ ಹೈ, ಏಕ್ ಪೂರಾ ವಾಕ್ಯ ಹೈ”. ತಿಳಿಲಿಲ್ಲ ಅಲ್ಲಾ? ಕೇಳ್ರಿ ಇಲ್ಲೆ… ಹೇಳ್ತೇನೀ...
ಛಾ? - (ಪ್ರಷ್ನಾರ್ಥಕ ಛಾ) ಅಂದ್ರ, ಕುಡೀತಿಯೆನು ಅಂತ ಅರ್ಥ. ಅದಕ್ಕ ನನ್ನ ಕಡೇ ಇಂದ ಖುಷಿ ಖುಷಿಯಾಗಿ ಉತ್ತರ… “Yes!!!”, ಆ ಕಡೆಯಿಂದ reply…. “ಮಾಡಹೋಗು”. 🙄, by mistake “NO” ಅಂದ್ರ, ಆ ಕಡೇ ಇಂದ reply… “ನನಗ ಮಾಡಿ ಕೊಡು” 🙄.
ಛಾ!!! - (ಉದ್ಗಾರಾರ್ಥಕ ಛಾ) ಅಂದ್ರ, “ಮಾಡ ಹೋಗೋ ಮಾರಾಯಾ” 🙄 ಅಂತ ಗೂಡಾರ್ಥ (ಆಡುಭಾಷಾದಾಗ ಇದಕ್ಕ Secret Meaning ಅಂತಾರ). ಎರಡು ಕಡೇನೂ, ನಾನ ಛಾ ಮಾಡಬೇಕು. ನನ್ನ ಪರಿಸ್ಥಿತಿ ಅಡಕೊತ್ತನಾಗ ಸಿಕ್ಕಂಥ ಅಡಿಕಿಹಾಂಗ. ನಿಮ್ಮದೂ ಇಂಥ ಸ್ಥಿತಿ ಆಗಿತ್ತಂದ್ರ, ಹೇಳ್ರಿ…
ವಿಜ್ಞಾನದಾಗ ನಾವು ನೀರಿಗೆ Universal Solvent ಅಂತ ಕರಿತಿವಿ, ಅಂದ್ರ ಈ ಜಗತ್ತಿನ್ಯಾಗಿನ ಯಾವದ ವಸ್ತುನ
ಕರಗಿಸೊ ಶಕ್ತಿ ನೀರಿಗೆ ಅದ ಅಂತ ನಾವ ಹೇಳ್ತಿವಿ. ಹಾಂಗ, ನಾವು ಛಾಕ್ಕ Universal Drink ಅಂತ ಯಾಕ ಕರಿಬಾರ್ದು?
ಹೌದ್ ಅಂತಿರಿಲ್ಲೋ? ಈಗ ನೊಡ್ರಿಲಾ,
- ಮನೀಗ ಮಂದಿ ( Guest ಆಡುಭಾಷಾದಾಗ, ಉರ್ಫ ಪೌಣ್ಯಾರ) ಬಂದ್ರು, ಅವಲಕ್ಕಿ - ಛಾ
- ಜೋರ್ ಮಳೀ ಬಂತು ( Rain ), ಮಿರ್ಚಿ ಭಜಿ - ಛಾ … ನೀರ್ ಬಂತಿಲ್ಲ ಬಾಯಾಗ 😀 ???
- ಆಫೀಸೀಂದ ಸುಸ್ತಾಗಿ ಬಂದ್ಯಾ, ಬಿಸ್ಕಿಟ್ - ಛಾ!!!
- ಆರಾಮ್ ಇಲ್ಲಾ, ಹಾಸಿಗೀ ಮ್ಯಾಲೆ ಮಲ್ಕೊಂಡಿ - Bread - ಛಾ ?!!
- ಉಪವಾಸ - ಏಕಾದಸೀ - ಉಪ್ಪಿಟ್ಟು - ಛಾ. ಉಪವಾಸದಾಗ ಛಾಕ್ಕ ದೋಷ ಇಲ್ಲ ಅಂತ ವಾದಸ್ತಿನಿ ಮತ್ತ :)
- Hotel ಗೆ ತಿನ್ನಲಿಕ್ಕೆ ಹೋಗಿರ್ತಿರಿ, ಇಡ್ಲೀ-ವಡಾ - ಛಾ.
- ದೋಸ್ತರ್ ಜೊತಿ ಪಾನ್ ಅಂಗಡಿ ಮುಂದ ನಿಂತಿರಿ, ಬೈಟು - ಛಾ
ಮಾಡಲಿಕ್ಕೆ ಸಿಫಾರಸು ( Recommend in ಕನ್ನಡ) ಮಾಡ್ತೇನಿ. ನಿಮ್ಮ ಅಭಿಪ್ರಾಯ ಕೆಳಗ comment ಮಾಡಿ ತಿಳಸ್ರಿ, ಆತ?
ಅದರೋಳಗ, ಈ ನಮ್ಮ U.K. ಜನಾ, ಅಂದ್ರ ಉತ್ತರ ಕರ್ನಾಟಕ ಮಂದಿಗೆ, ಛಾ ಅಂದ್ರ ಚಟಾ ಇಧ್ಧಂಗ. ಯಾವಾಗ ಬೇಕಾದಾವಾಗ ಕೇಳ್ರಿ “ಛಾ” ಅಂತ, “ಹೂಃ” ಅಂದ ಬಿಡ್ತಾರ. ಇವರು ಒಂದ ನಮೂನೀ “ಛಾ ದಾಗಿನ ಹುಳಾ ಇಧ್ಧಂಗ”. “ಏ… ಭಾಳಾ ಛಾ ಕುಡದ್ರ, ನಮಗ Gas ಆಗ್ತದ” ಅಂತ ಅನ್ನೋದು, ಮತ್ತ ಛಾ ಷಡ್ಡೋದು ( Normal ಭಾಷಾದಾಗ ಕುಡಿಯೋದು). ಅದೂ ಮೂರೂ ಹೊತ್ತು, ಇಲ್ಲಾ ನಾಕೂ ಹೊತ್ತು, ಇಲ್ಲಾ ಇಲ್ಲಾ ಹೊತ್ತು ಗೊತ್ತು ಸಂಬಂಧನ ಇಲ್ಲಾ. ನಡು ರಾತ್ರಿ ಎಬ್ಬಿಸಿ ಕೇಳ್ರಿ, “ಛಾ?” … ಕಣ್ಣ ತಿಕ್ಕೊತ “ಹುಃ, ಅರ್ಧ ಕಪ್ ಮಾಡೇ ಬಿಡ್ರಿ” ಅಂತಾರ. ಒಂದ ಥರಾ ಸುಧಾಮನ ಅವಲಕ್ಕಿ ಇಧ್ಧಂಗ, ಛಾ ಅಂದ್ರ ಇವ್ರಿಗೆ.
ನನ್ನ ಜೀವನದಾಗ, ಛಾ ಯಾವಾಗ ಪ್ರವೇಶ ಆತು ಅನ್ನೋದು ನನಗ ನೆನಪ ಇಲ್ಲಾ ಬಹುಶಃ… 2 - 3 ವರ್ಷದವಾ ಇದ್ದಿರಬಹುದು. ಯಾಕಂದ್ರ, ನನಗ ಬುದ್ಧಿ ಬಂದಾಗಿಂದ ಛಾ ಕುಡಿಲಿಕತ್ತೇನಿ ( ಈಗ ಬುಧ್ದಿ ಹೋಗಿಬಿಟ್ಟದ, ಆ ಮಾತ್ ಬ್ಯಾರೇ 😇 ). Let’s start with ನನ್ನ ಅಜ್ಜ (ಅಪ್ಪನ ಅಪ್ಪ). ಅವರ್ದು ಛಾ ಕುಡ್ಯೋ ರೀತೀ ವಿಚಿತ್ರ. ಅವರ್ದೋಂದು ಪಾವ ಲೀಟರ ಕಪ್ ಇತ್ತು (¼ liter in English ಅಲ್ಲಾ ಕನ್ನಡ). ಅಂಥ ಕಪ್ ನಾಗ ದಿವಸಕ್ಕ 6 ಸಲಾ ಛಾ ಕುಡಿತಿದ್ರು. ಇದು normal. ಅದರ ಜೊತಿ 30 ನಂಬರ ಬೀಡಿ. ಇನ್ನ ಅಪ್ಪಿ ತಪ್ಪಿ ಮಂದಿ ಬಂದ್ರ, 2 ಕಪ್ ಹೆಚ್ಚ. ಇದನ್ನೆಲ್ಲ ನೋಡಿ, ನಮ್ಮಪ್ಪ ಛಾನ ಬಿಟ್ಟ ಬಿಟ್ರು ಅನ್ನಸ್ತದ. ಛೇ… ಛೇ… ಛೇ…. ಛಾ ಕುಡಿಯೊ ಅಂಥ ಸದ್ಗುಣ ( ನನ್ನ ಪ್ರಕಾರ ) ಬಿಡೋದ??? ಅದೂ ನನ್ನಂಥ ಮೊಮ್ಮಗ ಇರೋವಾಗ? ಇಲ್ಲ ಬಿಡನೀ, ನಾ continue ಮಾಡತೇನಿ ಅಂತ ಪ್ರತಿಜ್ಞೆ ಮಾಡೇಬಿಟ್ಟೆ. ಭೀಷ್ಮ ಪ್ರತಿಜ್ಞೆ ಥರಾ ಅನಕೊರಿ, ನಡೀತದ. But ಛಾಕ್ಕ ಅಷ್ಟನಾ ಅದ, ಮತ್ಯಾವದಕ್ಕೂ ಅಲ್ಲಾ!!! ನಾ ಮದವೀ ಮಾಡಕೊಂಡು, ಶುಧ್ಧ ಸಂಸಾರಸ್ಥ. 😔…
ನಾ, 7th Standard ದಾಗ ಇದ್ದಾಗ, ಛಾದ್ದ full usage ಶುರು ಆತು. ಮುಂಜಾನೆ 4:00 ಘಂಟೇಗೆ ನಮ್ಮ ಅಪ್ಪಾ ನನ್ನ ಎಬ್ಬಸತಿದ್ರು. ಛಾ ಮಾಡಿ, ನನಗ ಕುಡಿಲಿಕ್ಕೆ ಕೊಟ್ಟು, ಗಣಿತ ಲೆಕ್ಕ ಮಾಡಲಿಕ್ಕೆ ಕೂಡಿಸ್ತಿದ್ರು, ಯಾಕಂದ್ರ ಗಣಿತ ಅಂದ್ರ ನನಗ ತಗಣಿ (Bed bugs in Kannada)ಇದ್ದಹಾಂಗ. ಗಣಿತ ನನ್ನ ತಲ್ಯಾಗ ಹೋತೋ ಇಲ್ಲೋ ಗೊತ್ತಿಲ್ಲ, ಛಾ ಚಟಾ ಮಾತ್ರ ಛೋಲೋ ಶುರು ಆತು. ಆಮ್ಯಾಲಿಂದ ನಾನು ಛಾ ಮಾಡಲಿಕತ್ತೆ. ಅಮ್ಮಾ ನನಗ ಛಾ ಮಾಡೋ job outsource ಮಾಡಿದ್ಲು ಫುಕ್ಕಟನ್ಯಾಗ. ಅಪ್ಪ ಏನೋ ಛೋಲೋ ಉದ್ದೇಶದಿಂದ ನನಗ ಎಬ್ಬಿಸಿ, ಓದು ಅಂದ್ರ, ನಾನು life long ಚಟ ಹಚ್ಚಕೊಂಡಿದ್ದೆ!!!
ಮುಂದ, Engineering College join ಆದೆ. ಅಲ್ಲೆ ದಿವಸಾ ನಾಷ್ಟಾ ಹೊತ್ತಿನಾಗ, ಏನರೇ ತಿನ್ನಲಿ… ಅದರ ಜೊತೀ, ಛಾ. ಛಾ ಅಂದ್ರ ಒಂದು ರೀತಿಯಿಂದ refreshment ಇದ್ದಂಗ. ಮೊನ್ನೆ ಮೊನ್ನೆ college ಗ ಹೋದಾಗು, ಓಂದ್ ಕಪ ಛಾ ಕುಡದ ಬಂದೆ. ಆಗ college ನಾಗ ಇದ್ದಾಗ ½ ಕಪ ಛಾ, ಅಷ್ಟ. ರೊಕ್ಕ ( Normal ಭಾಷಾದಾಗ Money) ಇರ್ತಿರಲಿಲ್ಲಾ ಅಂತ ಅಲ್ಲಾ, ಈ ದೋಸ್ತಗೋಳ ಇರ್ತಾರಲ್ಲಾ, “ ದೋ ದೋಸ್ತ ಎಕ್ ಕಪ ಮೈ ಚಾಯ್ ಪೀಯೆಂಗೆ, ದೋಸ್ತಿ ಬಢತಿ ಹೈ” ( Andaz Apna Apna …. ಡೈಲಾಗ. ಅದ… ನಮ್ಮ Sallu and Aamir ಶಿನೇಮಾ!!! ನೆನಪಾತಿಲ್ಲೋ?) ಅಂತ, ಒಂದು ಕಪ್ ನಾಗ ನಾಕ್ ಮಂದಿ ಕುಡ್ಯಾವ್ರು. ಎಲ್ಲಾರಿಗೂ ತೀರ್ಥದಶ್ಟ ಛಾ!!! ದೋಸ್ತಿ, ಖರೇನ ಗಾಢ ಆತು… 😘
ಅಭಿಯಾಂತ್ರಿಕ (Engineer in Normal ಭಾಷಾ) ಆದ ಮ್ಯಾಲೆ, Corporate world ಸೇರ್ಕೊಂಡೆ, ಅಲ್ಲೆ “Ice Breaker Session” ಅಂತಾರ. ಈದೊಂದ ರೀತಿ ಜನಾನ್ನ ಪರಿಚಯ ಮಾಡ್ಕೋಳ್ಳೋದು. ಅದೊಂದ ದೊಡ್ಡ timepass. ನಾನು, ನನ್ನ U.K. Skill ನ ನನ್ನ Skull ಇಂದ ಹೊರಗ ತಗದೆ. ಯಾರರೆ ಸಿಕ್ರ, “ಛಾ?” ಅಂತ ಕೇಳೋದು. ಆದಷ್ಟು ಜನಾ “ಹೂಃ” ಅಂತ ಬರ್ತಿದ್ರು. ಎಲ್ಲಾರು ಛಾ ಕುಡಕೊತ, ಮಂದಿ ಪರಿಚಯ ಶುರು ಆತು. ಅಲ್ಲೇ ಗೊತ್ತಾತು, ಛಾ ಬರೇ ಉತ್ತರ ಕರ್ನಾಟಕಕ್ಕ್ ಅಷ್ಟ famous ಅಲ್ಲಾ, ಅದು All Over India famous ಅಂತ. Corporate world ದಾಗ, ನನ್ನ ಛಾ experiment Success!!! ಮುಂದ ನಾ ಛಾನ್ನ Ice Breaker Session ಗೆ ಉಪಯೋಗಸ್ಲಿಕತ್ತೇನಿ….
ಮುಂದ ಮದಿವೀ ಆತು, ಈ ಮದವೀ ಮನ್ಯಾಗ ಮದುಮಕ್ಕಳನ್ನ ಬಿಟ್ರ, ಉಳದವೃ ಎಲ್ಲಾರೂ enjoy ಮಾಡತಾರ. ಅದಿರ್ಲಿ, post ಮದವೀ, ಹೊಸಾ relation, relatives ಎಲ್ಲಾ ಆಗತಾರ. ಅದರೊಳಗೂ, ಛಾ ಕುಡ್ಯೋರ ಇದ್ರಂರ ”ಸೋನೆ ಪೆ ಸುಹಾಗಾ”. ಇಲ್ಲೆ point ಎನ್ ಅಂದ್ರ, ಒಮ್ಮೆ ಊರಿಂದ ಅತ್ತಿ, ಮಾವಾ ಬಂದಿದ್ರು. ಹೊಸದಾಗಿ ಮದವೀ ಆಗಿತ್ತಲಾ, ಅತ್ತಿ ಮಾವನ್ನ impress ಮಾಡಲಿಕ್ಕೆ, ಮುಂಜಾನಿ breakfast ಅಲ್ಲೇ ಹೊಟೇಲದಿಂದ ತಂದೆ. ಇಡ್ಲಿ-ವಡಾ… ಮಸ್ತ ತಿಂದ್ವಿ. ತಿಂದ ಮ್ಯಾಲೆ, ನನ್ನ ಅತ್ತಿ ಒಂದು ಮಾತ ಹೇಳಿದ್ರು. ಅದನ್ನ ಕೇಳಿ ನನಗ, ಬೋಧೀ ವೃಕ್ಷದ ಕೆಳಗ ಕುತ್ತ ಬುಧ್ಧನ ಹಾಂಗ ಜ್ಞಾನೋದಯಾ ಆತ್ ನೋಡ್ರೀ. ಆ ಮಾತು, ಏನಂದ್ರ… “ಏನರೇ ಎಣ್ಣಿ ಪದಾರ್ಥ ತಿಂದ್ಯಾಂದ್ರ, ಬಿಸಿದು ಕುಡಿ ಬೇಕ್ ನೋಡು. ಇಲ್ಲಂದ್ರ ಖೆಮ್ಮ ಬರ್ತದ.” ಆತ್ ತಗೋನೀ, ನನಗೂ ಇನ್ನೋಂದ ಕಾರಣಾ ಸಿಕ್ತು, ಛಾ ಕುಡಿಲಿಕ್ಕೆ ಮತ್ತೊಂದು ಕಾರಣಾ ಸಿಕ್ತು… ಹಾಃ? ಏನಂತೀರಿ?.
ಆಮ್ಯಾಲೆ, ಅಮೇರಿಕಾಕ್ಕ move ಆದಮ್ಯಾಲೆ, ನಮ್ಮ ಎಲ್ಲಾ U.K. (United Kingdom ಅಲ್ಲಾ, ಉತ್ತರ ಕರ್ನಾಟಕ) ದೋಸ್ತ್ರು ಸಿಕ್ರು. ವಾರಕ್ಕ ಮೂರ್ ದಿವಸ ಎಲ್ಲರೇ ಸಿಕ್ಕ ಸಿಗತೇವಿ. ಯಾರದರೇ ಮನ್ಯಾಗ Get-together, ಇಲ್ಲಾ birthday party ಇದ್ದ ಇರ್ತಾವ. ಕೆಲವೊಮ್ಮೆ ಮಧ್ಯಾನ್ನ, ಇಲ್ಲಾ ಸಂಜೀಕ ಭೇಟಿ. ಹೀಂಗ ಸಿಕ್ಕಾಗ ಹರಟೀ ಹೋಡಕೋತ ಹೊತ್ತ ಹೋಗಿದ್ದ ಗೊತ್ತಾಗಂಗಿಲ್ಲ. ನಾವು UK ಜನಾ ಒಂದು ಹರಟೀ ಪ್ರಿಯರು, ಇಲ್ಲಾ ಛಾ ಪ್ರಿಯುರು, ಮತ್ತ ತಪ್ಪ ಹೇಳಿದೆ ನಾ… ನಾವು ಹರಟೀ ಜೊತಿ ಛಾ ಪ್ರಿಯರು. ಅದಕ್ಕ ನಾವೆಲ್ಲ ಸಿಕ್ಕಾಗ, ಯಾರ ಮನ್ಯಾಗ ಇರ್ತಿವೋ ಅವರ ಮನೀ ಒಳಗ ಛಾ ಮಾಡೋದು. ಪಾಪ, ಮನೀ owner ಬ್ಯಾರೇ ಕೆಲಸದಾಗ busy ಇದ್ರ, ನನ್ನಂಥ ಸ್ವಯಂಸೇವಕರು (volunteers in Kannada) ಭಾಳ ಇದ್ದಾರ… ಅವರು, ಎಲ್ಲಾರಿಗೂ ಛಾ ಮಾಡಿ ಹಂಚತಾರ. ಇದ ದೋಸ್ತರೆಲ್ಲಾ ಕೂಡಿ, ಓಡಲಿಕ್ಕೂ ಹೋಗ್ತೇವಿ, ಕೆರೀ ಸುತ್ತ, ವಾರಕ್ಕೋಮ್ಮೆ. ಅಲ್ಲಿ ಓಡಿದ್ ಮ್ಯಾಲೇ, ಛಾ ಕುಡಿಲಿಕ್ಕ ಹೋಗುದು ಒಂದು ಪ್ರಥಾ. 10 ಮಂದಿ ಓಡಲಿಕ್ಕ ಹೋದ್ರ, 8 ಮಂದಿ ಛಾ ಕುಡಿಲಿಕ್ಕೇ ಬಂದಿರ್ತ್ರಾರ.
ಇದೆಲ್ಲಾ ವಿಷಯಾ ನೋಡಿದ್ರ, ನನಗ ಹೀಂಗ ಅನ್ನಸ್ತದಲಾ, “Divided we are by Thoughts, Age and Principles, But United by ಛಾ!!!” . ನಮ್ಮ ಛಾ, U.K. ದಾಗ World famous. ಛಾದ ಬಗ್ಗೆ ನಾ ಒನ್ದ Ph.D ನ ಮಾಡಬಹುದ ಅನ್ನಸಲಿಕ್ಕತ್ತದ.
ನಿಮಗ ಏನ್ ಅನ್ನಸ್ತದ, ಇನ್ನ ಮ್ಯಾಲೆ ಯಾರರೇ ಛಾ ಅಂತ ಕೇಳಿದ್ರ? ತಿಳಸ್ರಿ ಕೆಳಗ Comment ಮಾಡಿ, share ಮಾಡ್ರಿ. ನಿಮ್ಮೂ ಕಥಿ ಇದ್ರ ಹೇಳ್ರಿ.
ಇಂತಿ, ನಿಮ್ಮ… (ಗೊತ್ತಾತಲ್ಲಾ)
V...
ಏಲ್ಲಿಟ್ಟಿದ್ಯೊ ಮಾರಾಯಾ ಇಷ್ಟ ವರ್ಷ ಈ ಟ್ಯಾಲಂಟ್ ನ 🙄 🤔
ReplyDeleteನಂದಂತೂ "ದಿನ್ ಕಿ ಶುರುವಾತ್ ಛಾಯ್ ಕಿ ಸಾಥ್" ಮಸ್ತಾತ್ ನೋಡಪಾ 🤗☕.
ಛಾ ಓದಕೋತ ಛಾ ಕುಡ್ದಿದ್ದ ಮಜಾ ಆಹಾ ಹೆಂಗಿತ್ತಂದ್ರ, ಈ ಬೆಂಗಳೂರು Traffic ನ್ಯಾಗ full~ಊ Tussss~ಆಗಿ ಬಂದಾಗ, ಒಂದು ಹನಿ TEA Tongue~ಗೆ Touch ಆದ್ರ ಆಗ್ತದಲ್ಲಾ, ಹಂತಾss ಪರಮಾssನಂದಾ ಆತು ನೋಡಪಾ 🤗😁☕😋😃
👍👍👌👍👍
Thank you, Rohini Akka... this is a great inspirational message.
Deleteಅದರ ಮ್ಯಾಲೆ ಆ ಆಡಿಯೋ, ಮಲಗೋರಿಗೆ ಹಾಸ್ಗಿ ಹಾಸ್ಕೊಟ್ಟಂಗ, ಎದ್ದೋರಿಗೆ Bed Tea ಕೊಟ್ಟಂಗ ಅದ ನೋಡಪಾ 😄👌👍
ReplyDeleteSuper Venu,
ReplyDeleteಸಂಧಿ ಸಮಾಸ ವ್ಯಾಕರಣ ಮಿಸ್ಸಾಳ ಮಸ್ತ್ ಅಗೆದ
Congratulations! Nice work of art, Venu. You must start writing, seriously. Publish some stuff.
ReplyDeleteSupper Venu
ReplyDelete