ಛಾ...
ಒಂದ ಶನಿವಾರ, ಮಟಾ ಮಟಾ ಮಧ್ಯಾನ್ನಾ, ಶೀನೇಮಾ ನೋಡಕೋತ ಕುತ್ತಿದ್ವಿ, ನಾನು ಮತ್ತ ನನ್ನ ಅರ್ಧಾ"ಅಂಗಿ" ( Normal ಭಾಷಾದಾಗ wife ಅಂತಾರ 😀). ಯಾವ ಶೀನೇಮಾ ಅದು.... ಹಾಂ... ನೆನಪಾತ ನೋಡ್ರಿ... PINK . ನೋಡಿರೇನು? ಅದರೊಳಗ ನಮ್ಮ " ಶೆಹನಷಾ " ಅಂದ್ರ ಅಮಿತಾಭ್ ಬಚ್ಚನ... ಅದ ನಮ್ಮ ಐಶ್ವರ್ಯಾ ಮಾವಾ?!! ಅವರ ಇದ್ದಾರ. ಏನ್ acting ಮಾಡತಾನಪಾ... ಇಷ್ಟ ವಯಸ್ಸಾದ್ರು ... ಗಿಚ್ಚ acting ಆಃ ಮತ್ತ. ಅದರಾಗ ಒಂದ scene ಬರ್ತದ. ಕೋರ್ಟ ಕೇಸ್ ಇರತದ. ಹೇಳ್ತಾರ ನಮ್ಮ ಬಚ್ಚನ್ ಸಾಹೇಬ್ರು ಜಡ್ಜಗ, “ NO MEANS NO , ಯೆ ಎಕ್ ಶಬ್ದ ನಹೀ ಹೈ, ಏಕ್ ಪೂರಾ ವಾಕ್ಯ ಹೈ. ಈ dailogue ಕೇಳಿ, ಚೊಕ್ಕ ಶೀಟೀ ಹೊಡ್ಯೋದ ?!! ಏನ್ ಈ ವೇಣು filmy ಇದಾನಪಾ ಅಂತ ಅನಕೋಬ್ಯಾಡ್ರಿ. ನಾ ಒಂದು ಸ್ವಲ್ಪ Bollywood (ಹಿಂದೀ ಶೀನೇಮಾ) ನಿಂದ ಪ್ರಭಾವಿತ ( Influence in ಆಡು ಭಾಷಾ) ಆಗೀನೀ. ಹೋಗ್ಲೀ, ಈ ನಿನ್ನ “ಛಾ” topic ಗೂ, Bollywood ಗೂ ಏನ್ ಸಂಬಂಧ? “ಇಮಾಮ್ ಸಾಬಿಗೂ, ಗೋಕುಲಾಷ್ಟಮೀಗೂ ಏನ್ ಸಂಬಂಧ ”, ಅನ್ನೋಗತೆ, ನೀವ್ ಕೆಳೋದು correct ಅದ!!! ಆ dialogue ಏನ್ ಅದಲಾ ಮ್ಯಾಲೆ ಶೀನೇಮಾದಾಗ, ಅದ ಹೊತ್ತಿನಾಗ ನನ್ನ ಇನ್ನೊಂದ ಅರ್ಧ (ಹೆಂಡತಿಗೆ ಇನ್ನೊಂದು ಸಮಾನಾರ್ಥಕ ಪದ) ಕೇಳಿದ್ಲು…. “ಛಾ”. ಇದು ಪ್ರಶ್ನಾರ್ಥಕ “ಛಾ?” ನೋ, ಅಥ್ವಾ ಉದ್ಗಾರಾರ್ಥಕ “ಛಾ!!!” ನೋ ಗೊತ್ತಾಗಲಿಲ್ಲ. ಯಾಕಂದ್ರ...