ಆರಂಭ...




ಹೀಂಗ ಒಂದ ಮನಿ ಒಳಗ ಊಟಾ ಮಾಡಿ ಛಾ ಕುಡಕೋತ ಕುತಿದ್ದೆ. ಮಗಾ, ಮಗಳು ಅಲ್ಲೇ ಆಡಕೋತ ಕುತಿದ್ರು. ಹೆಂಡತಿ ಮತ್ತ ಅಮ್ಮ ಅಡಿಗೀ ಮನ್ಯಾಗ ಇದ್ರು. ಅಪ್ಪಾ ಹೊರಗ Walking ಹೊಗಿದ್ರು. (ಇಂಥ Time ವಿಚಾರ ಮಾಡಲಿಕ್ಕೆ ಭಾಳ ಛೊಲೋ ನೋಡ್ರೀ ಯಾಕಂದ್ರ ತಲೀಗೆ ಬ್ಯಾರೇ ಕೆಲಸ ಇರುದಿಲ್ಲಾ). ಜೀವನದಾಗ ಇಷ್ಟ ವರ್ಷ ಕೆಲಸಾ ಮಾಡಕೋತ, ದೇಶಾ ಬಿಟ್ಟು ದೇಶಾ ತಿರಗಕೋತ ಎಷ್ಟೇಲ್ಲಾ time ತಗದೇ. ಜೀವನದಾಗ ಏನ ಸಾಧಿಸಿದೇ ಅಂತ "ಆತ್ಮಾವಲೋಕನ" (ಕನ್ನಡದಾಗ ಇದಕ್ಕ Introspection ಅಂತಾರ) ಮಾಡಲಿಕತ್ತಿದ್ದೆ. ನಾ ಮಾಡಿದ್ದು ಇನ್ನೋಬ್ಬರಿಗೆ ಉಪಯೋಗ ಆಗಲಿಕತ್ತದೇನು? (ಛೋಲೋ ಕೆಲಸಕ್ಕ), ಹಂಗಂತೇನು ನಾ ಸಮಾಜ ಸೇವಕ ಏನಲ್ಲಾ, QWERTY keyboard ಹಿಡಕೋಂಡ ಓಡಾಡೋ ಮನಶಾ. ಇರಲಿ ನನ್ನ ವಿಚಾರ ಧಾರಿಗ ಮತ್ತ ಬರೊಣು. ದಿನದ ಓಡಾಟದಾಗ ನನ್ನ "ಸೃಜನಶೀಲತೇ" ಗೆ (Again ಕನ್ನಡದಾಗ ಇದಕ್ಕ Creativity ಅಂತಾರ) ತುಕ್ಕ ಹಿಡಿಲಿಕ್ಕತ್ತದೇನೋ ಅಂತ ಹುಡಕಾಡಲಿ"ಕತ್ತೆ". ಇದ ಹುಡುಕಾಟದೊಳಗ ನಾ ಏನೋ ಹೊಸಾದ ಮಾಡಬೇಕ ಅನಸ್ತು. ಏನ್ ಮಾಡಬೇಕಂತ ತಿಳೀಲಿಲ್ಲ. ನನ್ನ ಎಲ್ಲಾ "ಪ್ರವೀಣ"ತೆ /"ಪ್ರಾವಿಣ್ಯ" ತೆ (Expertise in ಕನ್ನಡಾ) ಎಲ್ಲಾ ತಲಕಾಡಿದೆ, ಗೊತ್ತಾತು ನನ್ನ ಚಡ್ಡಿ ದೋಸ್ತ ಪ್ರವೀಣ ಅನ್ನವನ್ನ ಒಬ್ಬನ್ನ ಬಿಟ್ರ, ಬ್ಯಾರೇ ಏನು "ಪ್ರವೀಣ"ತೆ ಇಲ್ಲಾ ಅಂತ ನನ್ನೋಳಗ !!! 
ಇರಲಿ ಬಿಡಪಾ, ಇದ್ದದ್ದರೊಳಗ ನನ್ನ Coding skills ಬಿಟ್ರ ಮತ್ತೇನ್ ಮಾಡಬಹುದು ಮಂದಿಗೆ ತ್ರಾಸ್ ಕೊಡಲಿಕ್ಕೆ? ಯಾಕಂದ್ರ ಮಂದಿ ಜೊತಿ ಮಾತಾಡೋದು, ಹರಟಿ ಹೊಡೇಯೋದು, ಊರ್ ಊರ್ ತಿರಿಗ್ಯಾಡೋದು, ಹಾಡ್ ಕೇಳೋದು ಇವೆಲ್ಲಾ ನನ್ನ ಸ್ವಭಾವ/ಹವ್ಯಾಸಾ/ಚಟಾ. ಅದ ಏನೋ ಹೆಳ್ತಾರಲ್ಲ "ಹುಟ್ಟು ಗುಣಾ ಸುಟ್ರೂ ಹೊಗಂಗಿಲ್ಲ", ಹಾಂಗ ನಾನು ಮಂದಿಗೆ ತ್ರಾಸ ಕೊಡೋದ. ಅದ ಹೇಳ್ತಾರ ನಮ್ಮ ಐಟೀ ಒಳಗ, Continuous Improvement, Continuous Innovation. ನನ್ನ context ದಾಗ ಅದು ಹೊಸಾ ರೀತೀ ತ್ರಾಸ ಕೊಡೊದು? ಈ ಪ್ರಶ್ನೆಗೆ ಉತ್ತರ ಅಂದ್ರ - ಬರ್ಯೊದು. 
ಬರ್ಯೊದು - ಛೋಲೋ. ಮುಂದಿನ ಪ್ರಶ್ನೆ - ಏನ್ ಬರ್ಯೊದು? ಹ್ಯಾಂಗ ಬರ್ಯೊದು? (Pen ನ್ಯಾಗ ಬರೀಯೋ ಮಾರಾಯ ಅನ್ನಬ್ಯಾಡ್ರಿ ಮತ್ತ, ಅದ ನನಗ ಗೊತ್ತದ). ಏನ್ ಬರ್ಯೊದು - ಏನ್ ಬರ್ಯೊದು ಅನ್ನಕೊಳ್ಳ ಕತ್ತಿದ್ದೆ - ನನ್ನ life experience ? ನನ್ನ learnings? "ಸೈ" ಅನ್ನು ಅಂತ ಮನಸ್ಸು. ಇನ್ನ "ಹ್ಯಾಂಗ" ಬರ್ಯೊದು? ಈ ಪ್ರಶ್ನೆಗೆ ಉತ್ತರ - English? ಭಾಳಾ ಕಮ್ಮಿ ಮಂದಿ ಓದತಾರ (ಅದ್ಕಿಂತ ಜಾಸ್ತಿ ನನಗೂ ಛಂದಾಗಿ English ಬರೂದುಲ್ಲಾ, ಅದ ಹೆದರ್ಕಿ), ಕನ್ನಡಾ? ಹಾಃ, ಆದ್ರ Text Book ಕನ್ನಡ ಬರದ್ರ ನಮ್ಮ ಮಂದಿ ಓದಿದ ಮ್ಯಾಲೆ, Exam ಎಂದ ಅವ ಅಂತ ಕೇಳ್ತಾರ. ಬ್ಯಾಡಾ ನಮ್ಮ "ಪೇಢಾ ನಗರೀ, ಗಂಡು ಮೇಟ್ಟಿನ ನಾಡು", ಧಾರವಾಡ ಭಾಷಾದಾಗ ಬರದ್ರ ಹ್ಯಾಂಗ? 
ತಗೋರಿ "ಶ್ರೀ ಗಣೇಶ" ಮಾಡೇ ಬಿಟ್ಟೇ. ತಿಂಗಳಿಗೊಮ್ಮೇ ನಿಮ್ಮೇಲ್ಲಾರಿಗು ತ್ರಾಸಕೊಡೋ ವಿಧಾನಾ ಸಿಕ್ತು. But on a serious note, ನನಗ ನಿಮ್ಮ ಅನಿಸಿಕೆಗಳನ್ನ ಹೇಳ್ರಿ. ಬೈದ್ರು ಆತು ಹೊಗಳಿದ್ರು ಆತು.  
By the way, ಇಲ್ಲಿ ಬರೋ “ನಾ”/“ನಾನು” ಯಾರ ಅಂತ ಹೇಳ್ಳೇ ಇಲ್ಲಾ. ನಾನು ನಿಮ್ಮ ಜೊತಿ ಮಾತಾಡುದ್ರಾಗ ಇಷ್ಟ busy ಆಗಿನೀ ಅಂದ್ರ, ಹೆಸರು ಹೇಳೋದ್ರ ಪರಿವೇ ಇಲ್ಲಾ. ನಂದೇನು ಹೊಸದಾಗಿ ಮದಿವೀ ಆಗಿಲ್ಲ, ಇಲ್ಲಾಂದ್ರ ನಾಚಕೋತಿದ್ದೆ ಏನೋ ಹುಡುಗಿ ಆಗಿದ್ರ. ಹೆಸರು ಹೇಳೋದಂದ್ರ ಒನ್ದು ದೊಡ್ಡದೊಂದು ಯುದ್ಧ ಇಧಂಗ, ಈ ಮದಿವೀ ಆದ ಹೆಂಗಸರಿಗೆ. ಇರಲಿ, ಮತ್ತ ವಿಷಯ ಬಿಟ್ಟ ಹೊಂಟೆ ನೊಡ್ರಿ. Ok, ನನ್ನ ಹೆಸರು ವೇಣುಗೋಪಾಲ್ ಅಥಣೀಕರ್. ಮನ್ಯಾಗ "ಅಣ್ಣಾ" (ಹೇಂಡತಿಗ ಅಲ್ಲಾ) , ಸಾಲ್ಯಾಗಿನ ದೋಸ್ತರಿಗೆ "ವೇಣ್ಯಾ", ಮತ್ತ ಕೆಲಸದಾಗ "ವೇಣು"/"ವೀನು" (Veenu). ಹುಟ್ಟಿದ್ದು ಬೆಳದದ್ದು ಎಲ್ಲ ನಮ್ಮ ಬೆಳಗಾವಿ, ಧಾರವಾಡ್, ಗುಲಬರ್ಗಾ ಜಿಲ್ಲಾದಾಗ. ಅಂದ್ರ ಥಂಡಿ, ಮಳಿ ಮತ್ತ ಬಿಸಿಲ್ (ಅಲ್ಲ ಭಯಂಕರ ಬಿಸಿಲ್) ಪ್ರದೇಶದಾಗ respectively. ಓದಿದ್ದು ಊದೋದು ಎಲ್ಲಾ ಅಭಿಯಾಂತ್ರಿಕತೆ ( ಕನ್ನಡದಾಗ Engineering ಅಂತಾರ). ಇದು ನನ್ನ ಸಣ್ಣ intro. ಮುಂದ ಹೋಧಾಂಗ ನನ್ನ ಬಗ್ಗೆ ಇನ್ನ ಹೆಳ್ತಿನಿ…

ಇಂತಿ, ನಿಮ್ಮ .... (ಏನರೇ ಅನಕೋರಿ)
V...


Comments

  1. ಮಸ್ತ್, ಅಂದ್ರ ಕನ್ನಡ ದಾಗ Super!
    Keep it up...

    ReplyDelete
  2. This comment has been removed by a blog administrator.

    ReplyDelete

Post a Comment

Popular posts from this blog

ಕೋರೋನಾ... ಕೋರೋನಾ...

ಛಾ...

ಹೆಸರಾಗ ಏನದ?