ಆರಂಭ...
ಹೀಂಗ ಒಂದ ಮನಿ ಒಳಗ ಊಟಾ ಮಾಡಿ ಛಾ ಕುಡಕೋತ ಕುತಿದ್ದೆ. ಮಗಾ, ಮಗಳು ಅಲ್ಲೇ ಆಡಕೋತ ಕುತಿದ್ರು. ಹೆಂಡತಿ ಮತ್ತ ಅಮ್ಮ ಅಡಿಗೀ ಮನ್ಯಾಗ ಇದ್ರು. ಅಪ್ಪಾ ಹೊರಗ Walking ಹೊಗಿದ್ರು. (ಇಂಥ Time ವಿಚಾರ ಮಾಡಲಿಕ್ಕೆ ಭಾಳ ಛೊಲೋ ನೋಡ್ರೀ ಯಾಕಂದ್ರ ತಲೀಗೆ ಬ್ಯಾರೇ ಕೆಲಸ ಇರುದಿಲ್ಲಾ). ಜೀವನದಾಗ ಇಷ್ಟ ವರ್ಷ ಕೆಲಸಾ ಮಾಡಕೋತ, ದೇಶಾ ಬಿಟ್ಟು ದೇಶಾ ತಿರಗಕೋತ ಎಷ್ಟೇಲ್ಲಾ time ತಗದೇ. ಜೀವನದಾಗ ಏನ ಸಾಧಿಸಿದೇ ಅಂತ "ಆತ್ಮಾವಲೋಕನ" (ಕನ್ನಡದಾಗ ಇದಕ್ಕ Introspection ಅಂತಾರ) ಮಾಡಲಿಕತ್ತಿದ್ದೆ. ನಾ ಮಾಡಿದ್ದು ಇನ್ನೋಬ್ಬರಿಗೆ ಉಪಯೋಗ ಆಗಲಿಕತ್ತದೇನು? (ಛೋಲೋ ಕೆಲಸಕ್ಕ), ಹಂಗಂತೇನು ನಾ ಸಮಾಜ ಸೇವಕ ಏನಲ್ಲಾ, QWERTY keyboard ಹಿಡಕೋಂಡ ಓಡಾಡೋ ಮನಶಾ. ಇರಲಿ ನನ್ನ ವಿಚಾರ ಧಾರಿಗ ಮತ್ತ ಬರೊಣು. ದಿನದ ಓಡಾಟದಾಗ ನನ್ನ " ಸೃಜನಶೀಲತೇ " ಗೆ ( Again ಕನ್ನಡದಾಗ ಇದಕ್ಕ Creativity ಅಂತಾರ) ತುಕ್ಕ ಹಿಡಿಲಿಕ್ಕತ್ತದೇನೋ ಅಂತ ಹುಡಕಾಡಲಿ"ಕತ್ತೆ". ಇದ ಹುಡುಕಾಟದೊಳಗ ನಾ ಏನೋ ಹೊಸಾದ ಮಾಡಬೇಕ ಅನಸ್ತು. ಏನ್ ಮಾಡಬೇಕಂತ ತಿಳೀಲಿಲ್ಲ. ನನ್ನ ಎಲ್ಲಾ " ಪ್ರವೀಣ "ತೆ /" ಪ್ರಾವಿಣ್ಯ " ತೆ ( Expertise in ಕನ್ನಡಾ) ಎಲ್ಲಾ ತಲಕಾಡಿದೆ, ಗೊತ್ತಾತು ನನ್ನ ಚಡ್ಡಿ ದೋಸ್ತ ಪ್ರವೀಣ ಅನ್ನವನ್ನ ಒಬ್ಬನ್ನ ಬಿಟ್ರ, ಬ್ಯಾರೇ ಏನು " ಪ್ರವೀಣ "ತೆ ಇಲ್ಲಾ ಅಂತ ನನ್ನೋಳಗ !!!...