ಹೆಸರಾಗ ಏನದ?
"ಏ ರಾಜಾ, ಏ ತಮ್ಮಾ ... ಬಾ ಇಲ್ಲೆ", "ಏ ಗುರು"... "ಚಿ... ಚಿ..., ಬಾ ಇಲ್ಲೆ" ಅಂತ ಬ್ಯಾರೇ ಬ್ಯಾರೇ ಜನಾ ಕರ್ಯೋದನ್ನ, ನಮ್ಮ ಧಾರವಾಡದ ಹೊಟೇಲಗ ಹೋದಾಗ ಕೇಳಲಿಕತ್ತಿತ್ತು. ನಾನು ಒಬ್ಬನ್ನ ಕರದ ಬಿಡೋಣ ಅಂತ ಹೇಳಿ, ಜೋರ್ ಆವಾಜದಾಗ, "ಏ Hero, ಬಾ ಇಲ್ಲೇ" ಅಂತ ಕರದೇ. " Hero " ಶಬ್ದ ಕೇಳಿ, ಆ 18 - 20 ವರ್ಷದ ಹುಡುಗಾ, ಓಡಕೋತ ನನ್ನ ಹತ್ರ ಬಂದು, ನೀರಿನ ವಾಟಗಾ ಇಟ್ಟು, "ಏನ್ ಬೇಕ್ರಿ ಸರSS..." ಅಂತ ರಾಗಾ ಎಳದಾ. ನನಗ "ಸರ್... " ಅನ್ನಿಸಕೊಂಡ ರೂಢಾ ಇಲ್ಲ. ಸರ್ ಅಂದಕೂಡಲೇ, ಆಜು ಬಾಜು ನೋಡಲಿಕತ್ತೆ. ನಮ್ಮ ಸಾಲಿ ಮಾಸ್ತರ್ ಯಾರರೆ ಇದ್ದಾರೇನು ಅಂತ. ಸ್ವಲ್ಪ, ತಡವರಿಸಿದ್ಮ್ಯಾಲೆ ಗೊತ್ತಾತು, ಆ ಮಹಾನಾತ್ಮಾ (Great Soul in ಕನ್ನಡಾ) ನಾನ ಅಂತ. "ಹುಃ, ತಗೋರಿಪಾ", ಅಂತ ನನ್ನ Normal order ಕೊಟ್ಟೆ. ನನ್ನ ತಿಂಡಿ ಕಟದ ಮ್ಯಾಲೇ, ಹೊರಗ ಹೋಗಿ ಪಾನ ಹಾಕೊಳಿಕತ್ತಿದ್ದೆ. ಅಲ್ಯೂ ಜನಾ, ಪಾನ್ ಮಾಡಾವನ್ನ " ಏ ರಾಜಾ, ಏ ತಮ್ಮಾ.... ಮಸಾಲಾ ಪಾನ್ ಕಟ್ಟು", "ಏ ಗುರು... ಅಂಬಾಡಿ ಎಲಿ ತಾ". ಈ ರಾಜಾ, ತಮ್ಮಾ, ಗುರು... ಎಲ್ಲಾ ಒಬ್ಬವನ್ದ ಹೆಸರೇನಪಾ? ಒಬ್ಬ ಮನಷಾಗ ಎಶ್ಟರೇ ಹೆಸರು ಇರ್ತಾವಪಾ ಅಂತ ನನ್ನ ಪಾನ್ ಮೇಕೋತ, ತಲಿಗೆ ಕೆಲಸಾ ಕೊಟ್ಟೆ. ಪಾನ ತಿನ್ನೋಬೇಕಾರ ನನ್ನ ತಲೀ ಭಾಳ active ಇರ್ತದ. ಅದಕ್ಕ ...